Bengaluru 24°C
Ad

ಇಪಿಎಫ್ ಡೆತ್ ಕ್ಲೇಮ್ ಪ್ರಕ್ರಿಯೆ ಈಗ ಮತ್ತಷ್ಟು ಸರಳ: ಹೇಗೆ ಗೊತ್ತಾ ?

Epf

ವಾಣಿಜ್ಯ: ಇಪಿಎಫ್ ಖಾತೆ ರಚಿಸುವಾಗ ಆಧಾರ್ ಮತ್ತು ಯುಎಎನ್ ಮಾಹಿತಿ ಒಂದಕ್ಕೊಂದು ತಾಳೆಯಾಗಬೇಕು. ಇಲ್ಲದಿದ್ದರೆ ಹಣ ಹಿಂಪಡೆಯುವಾಗ  ಕಷ್ಟವಾಗುತ್ತದೆ. ಆಧಾರ್ ಮತ್ತು ಯುಎಎನ್ ಹೊಂದಿಕೆಯಾಗದೇ ಇರುವ ಇಪಿಎಫ್ ಖಾತೆದಾರ ಆಕಸ್ಮಿಕವಾಗಿ ಮೃತಪಟ್ಟಾಗ ನಾಮಿನಿ ಹಣ ಕ್ಲೇಮ್ ಮಾಡುವಾಗ ತೊಂದರೆ ಆಗುತ್ತದೆ.

ಸಾವನ್ನಪ್ಪಿದ ವ್ಯಕ್ತಿಯ ಆಧಾರ್ ದಾಖಲೆಯನ್ನು ತಿದ್ದಲು ಅಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಪಿಎಫ್​ಒ ಸಂಸ್ಥೆ ಹೊಸ ನಿಯಮವೊಂದನ್ನು ತಂದಿದ್ದು, ಇಂಥ ಪ್ರಸಂಗಗಳಲ್ಲಿ ಇಪಿಎಫ್ ಡೆತ್ ಕ್ಲೇಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

ಹೌದು. . ಒಂದು ವೇಳೆ ಆಧಾರ್ ಡಾಟಾ ಸರಿಯಾಗಿದ್ದು ಯುಎಎನ್​ನಲ್ಲಿ ತಪ್ಪಾಗಿದ್ದರೆ, 2024ರ ಮಾರ್ಚ್ 26ರಂದು ಹೊರಡಿಸಲಾದ ಮಾರ್ಗಸೂಚಿಯ ಪ್ಯಾರಾ 6.9 ಮತ್ತು 6.10ರಲ್ಲಿನ ನಿಯಮಗಳನ್ನು ಅನುಸರಿಸಬೆಕು. ಆಧಾರ್ ಮೂಲಕ ಯುಎಎನ್​ನಲ್ಲಿರುವ ದತ್ತಾಂಶವನ್ನು ಬದಲಾಯಿಸಬೇಕಾಗುತ್ತದೆ,’ ಎಂದು ಇಪಿಎಫ್​ಒ ಸಂಸ್ಥೆ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಸತ್ತ ಪಿಎಫ್ ಸದಸ್ಯರ ಆಧಾರ್ ಖಾತೆಗಳು ಡೀ ಆ್ಯಕ್ಟಿವೇಟ್ ಆಗಿರುವುದು, ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಇತ್ಯಾದಿ ಕಾರಣಗಳಿಂದ ಆಧಾರ್ ಅಥೆಂಟಿಕೇಶನ್ ಪಡೆಯಲು ಸಾಧ್ಯವಾಗದೇ ಹೋಗಬಹುದು. ಇಂಥ ಸನ್ನಿವೇಶದಲ್ಲಿ ಇಪಿಎಫ್​ಒ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.

ಸಾವಿನ ಪ್ರಕರಣಗಳಲ್ಲಿ ಆಧಾರ್ ಸೀಡಿಂಗ್ ಇಲ್ಲದೇ ಕ್ಲೈಮ್ ಪಡೆಯಲು ತಾತ್ಕಾಲಿಕವಾಗಿ ಅನುಮತಿಸಬಹುದು.

ಇ-ಆಫೀಸ್ ಫೈಲ್ ಮೂಲಕ ಆಫೀಸರ್ ಇನ್​ಚಾರ್ಜ್ ಅವರಿಂದ ಅನುಮೋದನೆ ಪಡೆಯಬೇಕು.

ಸಾವನ್ನಪ್ಪಿದ ಇಪಿಎಫ್ ಸದಸ್ಯನ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವ ವ್ಯಕ್ತಿಯ ವಿವರಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು.

ಹೀಗೆ ಇಪಿಎಫ್ ಡೆತ್ ಕ್ಲೇಮ್ ಪ್ರಕ್ರಿಯೆ ಸರಳವಾಗಿ ಮಾಡಬಹುದಾಗಿದೆ.

Ad
Ad
Nk Channel Final 21 09 2023
Ad