Bengaluru 25°C
Ad

ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ: ದಾಖಲೆ ಬರೆದ ವಿರಾಟ್‌ ಕೊಹ್ಲಿ

ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 8000 ರನ್‌ ಹೊಡೆದ ಏಕೈಕ ಬ್ಯಾಟರ್‌ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಅಹಮದಾಬಾದ್‌: ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 8000 ರನ್‌ ಹೊಡೆದ ಏಕೈಕ ಬ್ಯಾಟರ್‌ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಒಟ್ಟು 252 ಪಂದ್ಯಗಳಿಂದ ಈ ಸಾಧನೆ ನಿರ್ಮಾಣವಾಗಿದೆ. ಐಪಿಎಲ್‌ (IPL) ಒಟ್ಟು 8 ಶತಕ ಮತ್ತು 55 ಅರ್ಧಶತಕವನ್ನು ಕೊಹ್ಲಿ ಸಿಡಿಸಿದ್ದಾರೆ.

ಈ ವರ್ಷದ ಐಪಿಎಲ್‌ಲ್ಲಿ 15 ಪಂದ್ಯಗಳ 15 ಇನ್ನಿಂಗ್ಸ್‌ನಿಂದ ಕೊಹ್ಲಿ 741 ರನ್‌ ಹೊಡೆದಿದ್ದಾರೆ. 1 ಶತಕ, 5 ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಆರೆಂಜ್‌ ಕ್ಯಾಪ್‌ ಧರಿಸಿದ್ದಾರೆ.

ಪಂಜಾಬ್‌ ಕಿಂಗ್ಸ್‌ನ ನಾಯಕ ಶಿಖರ್‌ ಧವನ್‌ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಶಿಖರ್‌ ಧವನ್‌ 222 ಪಂದ್ಯಗಳಿಂದ 6,769 ರನ್‌ ಹೊಡೆದಿದ್ದಾರೆ. ರೋಹಿತ್‌ ಶರ್ಮಾ 257 ಪಂದ್ಯಗಳಿಂದ 6,628 ರನ್‌ ಸಿಡಿಸಿದ್ದಾರೆ.

ರಾಜಸ್ಥಾನ ವಿರುದ್ಧ ಇಂದು ನಡೆಯುತ್ತಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಕೊಹ್ಲಿ 33 ರನ್‌(24 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.

Ad
Ad
Nk Channel Final 21 09 2023
Ad