News Karnataka Kannada
Sunday, April 21 2024
Cricket
ಮಂಗಳೂರು

ಸರ್ಕಾರಿ ದಾಖಲೆ ನಕಲಿ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ

Shop raided for forging government documents
Photo Credit : News Kannada

ಪುತ್ತೂರು: ಪುತ್ತೂರಿನ ಪಡೀಲಿನಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವನಾಥ್ ಎಂಬುವರಿಗೆ ಸೇರಿದ ಬಿ.ಬಿ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಸೆಂಟರಿನಲ್ಲಿ ಸರ್ಕಾರಿ ದಾಖಲೆಗಳ ನಕಲಿ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಪುತ್ತೂರು ತಾಪಂ ಇಒ ನೇತೃತ್ವದ ತಂಡ ದಾಳಿ ನಡೆಸಿ ನಕಲಿ ದಾಖಲೆ, ನಕಲಿ ಸೀಲ್ ವಶಕ್ಕೆ ಪಡೆದುಕೊಂಡಿದೆ.

ಸರ್ಕಾರದಿಂದ ಅನುಮತಿ‌ ಪಡೆದ ಗುತ್ತಿಗೆದಾರರು ಇವರಾಗಿದ್ದು, ಮೆಸ್ಕಾಂನ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ, ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್ ಹಾಗೂ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿಗಳ ಸೀಲ್ ಗಳನ್ನೇ ಹೋಲುವ ನಕಲಿ ಸೀಲ್ ಗಳು‌ ಪತ್ತೆಯಾಗಿವೆ.

ದಾಖಲೆ ಪತ್ರಗಳಿಗೆ ಫೋರ್ಜರಿ ಸಹಿ‌ ಹಾಕಿ, ಅದಕ್ಕೆ ನಕಲಿ ಸೀಲ್ ಗಳನ್ನು ಹಾಕಲಾಗುತ್ತಿತ್ತು. ಸಾರ್ವಜನಿಕ ದೂರಿನ‌ ಮೇರೆಗೆ ತಾಪಂ ಇಓ ನವೀನ್ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು