Bengaluru 22°C
Ad

ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ; ವಿಡಿಯೋ ವೈರಲ್

Raga

ಉತ್ತರಪ್ರದೇಶ: ಉತ್ತರಭಾರತದಲ್ಲಿ ಬಿಸಿಲ ಬೇಗೆ ದಿನೇ ದಿನೇ ಹಚ್ಚಾಗುತ್ತಿದೆ. ಜನ ಅಂತೂ ಸೆಖೆಗೆ ಬಳಲಿ ಬೆಂಡಾಗಿದ್ದಾರೆ. ಇದೀಗ ಬಿಸಿಲಿನ ಶಾಖ ಕಾಂಗ್ರೆಸ್‌ ನಾಯಕ  ರಾಹುಲ್‌ ಗಾಂಧಿ ಅವರಿಗೂ ತಟ್ಟಿದೆ.

ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ  ರಾಹುಲ್‌ ಗಾಂಧಿ ಅವರ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ರುದ್ರಪುರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ ವೇದಿಕೆಯಲ್ಲಿ ಮಾತನಾಡುತ್ತಾ ಅಲ್ಲೇ ಇದ್ದ ಬಾಟಲಿಯ ನೀರನ್ನು ತಲೆಗೆ ಸುರಿದುಕೊಂಡಿದ್ದಾರೆ. ಅಲ್ಲದೇ ಅಬ್ಬಾ ಎಂಥಾ ಸೆಖೆ ಎಂದು ಹೇಳಿದ್ದಾರೆ. ಇದು ವಿಡಿಯೋದಲ್ಲಿ ಸೆರೆ ಆಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಉತ್ತರಭಾರತದಲ್ಲಿ ಸಹಿಸಲಾಗದಂತಹ ಬಿಸಿಗಾಳಿ ಬೀಸುತ್ತಿದ್ದು, ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ.

ಎರಡು ದಿನಗಳ ಹಿಂದೆಯಷ್ಟೇ ರಾಹುಲ್‌ ಗಾಂಧಿ ಭಾಗಿಯಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆ ಕುಸಿದ ಘಟನೆ ವರದಿಯಾಗಿತ್ತು. ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ  ಚುನಾವಣೆ ಪ್ರಚಾರ ಕೈಗೊಂಡಿದ್ದರು. ರಾಹುಲ್‌ ಗಾಂಧಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವ ವೇಳೆ ಅವರಿದ್ದ ವೇದಿಕೆ ಕುಸಿದಿದ್ದು, ಸ್ವಲ್ಪರದರಲ್ಲಿಯೇ ಅವರು ಪಾರಾಗಿದ್ದರು.

Ad
Ad
Nk Channel Final 21 09 2023
Ad