Bengaluru 23°C
Ad

ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದು ಅತ್ಯಾಚಾರ ಮಾಡಿದ ವ್ಯಕ್ತಿ

ಚಿಕಿತ್ಸೆಗೆಂದು ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪರಿಚಯಸ್ಥನೇ ಆಸ್ಪತ್ರೆಯಲ್ಲಿ ಅತ್ಯಾಚಾರ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು: ಪೈಲ್ಸ್ ಚಿಕಿತ್ಸೆಗೆಂದು ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪರಿಚಯಸ್ಥನೇ ಆಸ್ಪತ್ರೆಯಲ್ಲಿ ಅತ್ಯಾಚಾರ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಆರೋಪಿಯನ್ನು ಕೇರಳ  ಮೂಲದ ಸಜಿತ್ ಎಂದು ಗುರುತಿಸಲಾಗಿದ್ದು, ಕದ್ರಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೈಲ್ಸ್ ಗೆ ಚಿಕಿತ್ಸೆಗೆ ಯುವತಿಯನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಜಿತ್, ಚಿಕಿತ್ಸೆಯ ಬಳಿಕ ಆಸ್ಪತ್ರೆಯ ಕೊಠಡಿಯಲ್ಲಿದ್ದ ವೇಳೆ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ನಗ್ನ ಫೋಟೋಗಳನ್ನ ತೆಗೆದಿದ್ದು, ಬೆದರಿಕೆ ಹಾಕಿದ್ದಾನೆ.

ಆ ಬಳಿಕ ನಗ್ನ ಫೋಟೋ ಇದೆ ಎಂದು ಬೆದರಿಸಿ, ಆಕೆಯನ್ನು ಮಂಗಳೂರಿನ ಮಹಾರಾಜ ಹೋಟೇಲ್ ಗೆ ಕರೆಸಿಕೊಂಡು‌ ಅಲ್ಲಿನ ಕೊಠಡಿಯಲ್ಲಿ ಅತ್ಯಾಚಾರ ನಡೆಸಿದ್ದಾನೆ.

ಅದಾದ ಬಳಿಕ ಯುವತಿ ಫುಡ್ ಫಾಯಿಸನ್ ಆಗಿ ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾದಾಗಲೂ ಕೊಠಡಿಯಲ್ಲಿ ಅತ್ಯಾಚಾರ ಮಾಡಿದ್ದಾನೆಂದು ಯುವತಿ‌ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದಾಳೆ.

Ad
Ad
Nk Channel Final 21 09 2023
Ad