Bengaluru 29°C
Ad

ʼಜೈಶ್ರೀರಾಮ್‌ʼ ಹಾಡು ಹಾಕಿದಕ್ಕೆ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಗಲಾಟೆ

ಧರ್ಮವೊಂದಕ್ಕೆ ಸಂಬಂಧಿಸಿದ ಗೀತೆಗೆ ನೃತ್ಯ ಮಾಡುತ್ತಿರುವಾಗ ಎರಡು ಸಮುದಾಯದ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಬೀದರ್‌ ನಗರದ ಮೈಲೂರ ಮಾರ್ಗದಲ್ಲಿರುವ ಗುರುನಾನಕ ದೇವ ಇಂಜಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಬೀದರ್:  ಧರ್ಮವೊಂದಕ್ಕೆ ಸಂಬಂಧಿಸಿದ ಗೀತೆಗೆ ನೃತ್ಯ ಮಾಡುತ್ತಿರುವಾಗ ಎರಡು ಸಮುದಾಯದ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಬೀದರ್‌ ನಗರದ ಮೈಲೂರ ಮಾರ್ಗದಲ್ಲಿರುವ ಗುರುನಾನಕ ದೇವ ಇಂಜಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಕಾಲೇಜಿನಲ್ಲಿ ಮೇ 30,31 ರಂದು ಎರಡು ದಿನಗಳ ಕಾಲ ತಾಂತ್ರಿಕ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮಕ್ಕೆ ಪೂರ್ವಭಾವಿ ತಯ್ಯಾರಿ ನಡೆಸುತ್ತಿದ್ದಾಗ ʼಜೈಶ್ರೀರಾಮʼ ಗೀತೆ ಹಾಕಿ ನೃತ್ಯ ಮಾಡುವ ವೇಳೆ ಅನ್ಯಕೋಮಿನ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ಈ ವೇಳೆ ಎರಡೂ ಕಡೆಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ.

ವಿಷಯ ತಿಳಿದು ಸ್ಥಳಕ್ಕೆ ಗಾಂಧಿ ಗಂಜ ಪೊಲೀಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಗಾಂಧಿಗಂಜ ಠಾಣೆಯಲ್ಲಿ ಅನ್ಯಕೋಮಿನ 17 ಮತ್ತು ಇತರೆ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದು ಸಮುದಾಯದ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ಬಂದು 2 ವಿದ್ಯಾರ್ಥಿಗಳು ಸೇರಿ ಇತರೆ 5-6 ವಿದ್ಯಾರ್ಥಿಗಳ ವಿರುದ್ಧ ಪ್ರತಿ ದೂರು ನೀಡಿದ್ದಾರೆ.

ಮುಂಜಾಗೃತ ಕ್ರಮವಾಗಿ ಎರಡು ಗುಂಪಿನವರ ಮೇಲೆ ಶಾಂತಿ ಕಾಪಾಡಲು ಸಿಆರ್‌ಪಿಸಿ ಕಲಂಗಳ ಅಡಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಕಾಲೇಜಿನ ಆಡಳಿತ ಮಂಡಳಿರವರು ಇದೇ ತಿಂಗಳು 30 ಮತ್ತು 31 ರಂದು ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಗೊಳಿಸಿರುವದಾಗಿ ತಿಳಿಸಿರುತ್ತಾರೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಕಾಲೇಜಿನಲ್ಲಿ ಶಾಂತತೆ ಕಾಪಾಡಬೇಕು. ಕಾಲೇಜಿನ ಬಳಿ ಸೂಕ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಕಾಲೇಜಿನಲ್ಲಿ ಶಾಂತ ಪರಿಸ್ಥಿತಿ ಇದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್‌ ತಿಳಿಸಿದ್ದಾರೆ

Ad
Ad
Nk Channel Final 21 09 2023
Ad