Bengaluru 22°C
Ad

ಸುಧಾಕರ್ ಅವರು ಒಂದು ವೋಟು ಜಾಸ್ತಿ ಪಡೆದರೆ ನಾನು ರಾಜೀನಾಮೆ ನೀಡುತ್ತೇನೆ: ಪ್ರದೀಪ್ ಈಶ್ವರ್

ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ವೋಟು ಜಾಸ್ತಿ ಪಡೆದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. 

ಬೆಂಗಳೂರು:  ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ವೋಟು ಜಾಸ್ತಿ ಪಡೆದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಅವರು ಒಂದು ಮತ ಜಾಸ್ತಿ ಪಡೆಯಲಿ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ. ನಾನು ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

ಈಶ್ವರಪ್ಪನವರು ಬ್ಯಾಕ್ವರ್ಡ್ ಕ್ಲಾಸ್‍ನವರು. ಅಂತವರನ್ನೂ ನೀವು ಮೂಲೆ ಗುಂಪು ಮಾಡಿದ್ರಿ. ಇದರ ಬಗ್ಗೆ ನೀವು ಮಾತನಾಡಿ. ವಿಜಯೇಂದ್ರ ತಲೆಯಲ್ಲಿ ಕಂಟೆಂಟ್ ಇಲ್ಲ. ವಿಚಾರಗಳ ಮೇಲೆ ಮಾತನಾಡೋಕೆ ಆಗಲ್ಲ. ಅವರ ತಲೆಯಲ್ಲಿರೋದೆಲ್ಲ ಮುಗಿದು ಹೋಗಿದೆ. ಅದಕ್ಕೆ ಇಂತಹ ವೈಯುಕ್ತಿಕ ವಿಷಯ ಮಾತನಾಡ್ತಿದ್ದಾರೆ ಎಂದು ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

 

Ad
Ad
Nk Channel Final 21 09 2023
Ad