Bengaluru 23°C
Ad

ಹೆಚ್ಚಿನ ಬಡ್ಡಿ ದರ ವಸೂಲಾತಿ ಮಾಡಿದ್ದಲ್ಲಿ ದೂರು ಸಲ್ಲಿಸಿ!

ಜಿಲ್ಲೆಯ ಲೇವಾದೇವಿದಾರರು ಗಿರಿವಿದಾರರು ಹಾಗೂ ಹಣಕಾಸು ಸಂಸ್ಥೆಗಳು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ರ ಪ್ರಕರಣ 28 ರಡಿ ಸರ್ಕಾರವು ನಿಗದಿಪಡಿಸಿರುವ ಭದ್ರತೆ ಸಾಲಗಳಿಗೆ 14% ಹಾಗೂ ಭದ್ರತಾ ರಹಿತ ಸಾಲಗಳಿಗೆ 16% ಗರಿಷ್ಠ ಬಡ್ಡಿದರ ಸರ್ಕಾರದಿಂದ ನಿಗದಿಪಡಿಸಲಾಗಿರುತ್ತದೆ.‌

ಬೀದರ್: ಜಿಲ್ಲೆಯ ಲೇವಾದೇವಿದಾರರು ಗಿರಿವಿದಾರರು ಹಾಗೂ ಹಣಕಾಸು ಸಂಸ್ಥೆಗಳು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ರ ಪ್ರಕರಣ 28 ರಡಿ ಸರ್ಕಾರವು ನಿಗದಿಪಡಿಸಿರುವ ಭದ್ರತೆ ಸಾಲಗಳಿಗೆ 14% ಹಾಗೂ ಭದ್ರತಾ ರಹಿತ ಸಾಲಗಳಿಗೆ 16% ಗರಿಷ್ಠ ಬಡ್ಡಿದರ ಸರ್ಕಾರದಿಂದ ನಿಗದಿಪಡಿಸಲಾಗಿರುತ್ತದೆ.‌

ಹಾಗೂ ಸಹಕಾರ ಸಂಘಗಳ ನಿಬಂಧಕರ ಕಚೇರಿ, ಬೆಂಗಳೂರು ಇವರ ಸುತ್ತೋಲೆಯ ರೀತ್ಯಾ ಕಡ್ಡಾಯವಾಗಿ ಬಡ್ಡಿದರದ ನಾಮಫಲಕವನ್ನು ಸಂಸ್ಥೆಯ ಕಚೇರಿಗಳಲ್ಲಿ ಪ್ರದರ್ಶಿಸಲು ತಿಳಿಸಿದೆ.

ಯಾವುದೇ ಲೇವಾದೇವಿ/ಗಿರವಿ/ಹಣಕಾಸು ಸಂಸ್ಥೆಗಳು ಬಡ್ಡಿದರ ನಿಗದಿಪಡಿಸಿದ ನಾಮಫಲಕವನ್ನು ಅಂಗಡಿಗಳಲ್ಲಿ ಪ್ರದರ್ಶಿಸಿಸಿರುವುದಿಲ್ಲವೋ ಮತ್ತು ಹೆಚ್ಚಿನ ಬಡ್ಡಿದರ ವಿಧಿಸಿ ಸಾರ್ವಜನಿಕರನ್ನು ವಂಚಿಸಿದನ್ನು ಕಂಡುಬAದರೆ ಅಂತಹ ಲೇವಾದೇವಿ/ಗಿರವಿ/ಹಣಕಾಸು ಸಂಸ್ಥೆಗಳ ಮೇಲೆ ಕ್ರಮಕೈಕೊಳ್ಳಲಾಗುವುದು.

ಸಂಸ್ಥೆಯಲ್ಲಿ ಹೆಚ್ಚಿನ ಬಡ್ಡಿದರ ವಿಧಿಸಿದಲ್ಲಿ ಸಿ.ಡಿ.ಓ. ಭಾಲ್ಕಿ 8197578545, 9448236202, ಸಿ.ಡಿ.ಓ. ಹುಮನಾಬಾದ 9611857716, ಬೀದ‌ರ್  ನಿರೀಕ್ಷಕರು 9738605951, ಔರಾದ ನಿರೀಕ್ಷಕರು 9738349084, ಬಸವಕಲ್ಯಾಣ ನಿರೀಕ್ಷಕರು 9916946732 ನಂಬರಗಳಿಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಬೀದರ ಲೇವಾದೇವಿ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad