Bengaluru 23°C
Ad

ಚಿತ್ರರಂಗದ ಸಮಸ್ಯೆ ಚರ್ಚೆ ಮಾಡಲು ಗೋವಾಗೆ ಹೋಗಿದ್ದ ನಿರ್ಮಾಪಕರ ಗಲಾಟೆ

ಚಿತ್ರರಂಗದ ಸಮಸ್ಯೆಯನ್ನು ಚರ್ಚೆ ಮಾಡುವುದಕ್ಕೆಂದು ಗೋವಾಗೆ  ಹೋಗಿದ್ದ ನಿರ್ಮಾಪಕರು ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ.  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಗೋವಾ ಪ್ರವಾಸ ಬೆಳೆಸಿದ್ದರು.

ಗೋವಾ: ಚಿತ್ರರಂಗದ ಸಮಸ್ಯೆಯನ್ನು ಚರ್ಚೆ ಮಾಡುವುದಕ್ಕೆಂದು ಗೋವಾಗೆ  ಹೋಗಿದ್ದ ನಿರ್ಮಾಪಕರು ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಗೋವಾ ಪ್ರವಾಸ ಬೆಳೆಸಿದ್ದರು.

ಗೋವಾದ ಹಿಬೀಸ್ ರೆಸಾರ್ಟ್ನಲ್ಲಿ ನಿನ್ನೆ ರಾತ್ರಿ (ಮೇ ೨೭) ಚರ್ಚೆ ನಡೆಯುವಾಗ ಮಾತಿಗೆ ಮಾತು ಬೆಳೆದು ಸಣ್ಣದಾಗಿ ಗಲಾಟೆ ಶುರುವಾಗಿದೆ. ಗಲಾಟೆ ಕೈ ಕೈ ಮಿಲಾಯಿಸುವ ಹಂತ ತಲುಪಿದೆ.

ಗೋವಾ ಟ್ರಿಪ್‌ಗೆ ಹೋದ ನಿಯೋಗದ ಸದಸ್ಯರು, ಪದಾಧಿಕಾರಿಗಳು ನಾಳೆ (ಮೇ ೨೯) ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಗಲಾಟೆಯ ನಂತರ ಸತೀಶ್ ಆರ್ಯ, ಎ.ಗಣೇಶ್ ಹಾಗೂ ರಥಾವರ ಮಂಜುನಾಥ್ ಅವರನ್ನು ಬೆಂಗಳೂರಿಗೆ ವಾಪಸ್ಸು ಕಳುಹಿಸಲಾಗಿದೆಯಂತೆ.

ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ.ಸುರೇಶ್, ಉಮೇಶ್ ಬಣಕಾರ್, ಆಸ್ಕರ್ ಕೃಷ್ಣ, ಭಾಮಾ ಹರೀಶ್, ಭಾಮಾ ಗಿರೀಶ್, ಟೇಸಿ ವೆಂಕಟೇಶ್, ಸತೀಶ್ ಆರ್ಯ, ರಥಾವರ ಮಂಜುನಾಥ್, ಎ.ಗಣೇಶ್ ಸೇರಿ ಮುಂತಾದವರು ಗೋವಾ ಪ್ರವಾಸಕ್ಕೆ ತೆರಳಿದ್ದರು.

Ad
Ad
Nk Channel Final 21 09 2023
Ad