Bengaluru 30°C
Ad

ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ನಟ ಶಿವರಾಜ್​ಕುಮಾರ್

ಶಿವಮೊಗ್ಗದಲ್ಲಿ ಎಲೆಕ್ಷನ್​ ಮುಗಿದ ನಂತರ ನಟ ಶಿವರಾಜ್​ಕುಮಾರ್​  ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದು, ಬಹುನಿರೀಕ್ಷಿತ ‘ಉತ್ತರಕಾಂಡ’  ಸಿನಿಮಾದಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಶಿವಮೊಗ್ಗದಲ್ಲಿ ಎಲೆಕ್ಷನ್​ ಮುಗಿದ ನಂತರ ನಟ ಶಿವರಾಜ್​ಕುಮಾರ್​  ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದು, ಬಹುನಿರೀಕ್ಷಿತ ‘ಉತ್ತರಕಾಂಡ’  ಸಿನಿಮಾದಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

‘ಉತ್ತರಕಾಂಡ’ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಹಾನಿ ಇರಲಿದೆ. ಹಾಗಾಗಿ ಈ ಸಿನಿಮಾದ ಚಿತ್ರೀಕರಣವನ್ನು ಬೆಳಗಾವಿಯಲ್ಲಿ ಮಾಡಲಾಗುತ್ತಿದೆ. ಶೂಟಿಂಗ್​ ಮುಗಿದ ಬಳಿಕ ಶಿವರಾಜ್​ಕುಮಾರ್​ ಅವರು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಶಿವರಾಜ್​ಕುಮಾರ್, ಡಾಲಿ‌ ಧನಂಜಯ, ಐಶ್ವರ್ಯಾ ರಾಜೇಶ್, ದಿಗಂತ್ ಮಂಚಾಲೆ, ಭಾವನಾ‌ ಮೆನನ್, ರಂಗಾಯಣ ರಘು, ವಿಜಯ್ ಬಾಬು ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಕೆ.ಆರ್.ಜಿ. ಸ್ಟುಡಿಯೋಸ್’ ಮೂಲಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ರೋಹಿತ್ ಪದಕಿ ಅವರ ನಿರ್ದೇಶನದಲ್ಲಿ ‘ಉತ್ತರಕಾಂಡ’ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಡ್ರಾಮಾ ಇರಲಿದೆ.

ಅವರ ಪಾಲಿಗೆ ಈ ಕ್ಷೇತ್ರ ಅದೃಷ್ಟ. ಈ ಮೊದಲು ‘ಶ್ರೀರಾಮ್’, ‘ಮೈಲಾರಿ’ ಮುಂತಾದ ಸಿನಿಮಾಗಳಿಗೂ ಸವದತ್ತಿ ಯಲ್ಲಮ್ಮ ತಾಯಿಯ ಆಶೀರ್ವಾದ ಸಿಕ್ಕಿತ್ತು.

Ad
Ad
Nk Channel Final 21 09 2023
Ad