News Karnataka Kannada
Monday, April 22 2024
Cricket
ಮಂಗಳೂರು

ಟ್ರೋಲ್‌ ಕಿಂಗ್‌ಗೆ ಟಿಕೇಟ್‌ ಇಲ್ಲ, ದಕ್ಷಿಣ ಕನ್ನಡದಿಂದ ಮೂವರ ಹೆಸರು

No ticket for Troll King, three names from Dakshina Kannada
Photo Credit : Facebook

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಟ್ರೋಲ್‌ ಗೆ ಒಳಗಾಗಿರುವ ಟ್ರೋಲ್‌ ಕಿಂಗ್‌ ಆಗಿರುವ ಸಂಸದ ನಳಿನ್‌ಗೆ ಈ ಬಾರಿ ದಕ್ಷಿಣ ಕನ್ನಡದಿಂದ ಬಿಜೆಪಿ ಲೋಕಸಭೆ ಟಿಕೇಟ್‌ ದೊರೆಯುವುದು ಬಹುತೇಕ ಅನುಮಾನ ಎಂಬ ಮಾಹಿತಿಯಿದೆ.

ಈ ನಿಟ್ಟಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರು ಕ್ಷೇತ್ರದಿಂದ ಅಲ್ಪ ಮತಗಳ ಅಂತರದಿಂದ ಸೋತಿದ್ದ ಅರುಣ್ ಕುಮಾರ್‌ ಪುತ್ತಿಲ ಮುಂಬರುವ ಲೋಕಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಪುತ್ತಿಲರಿಗೆ ಬಿಜೆಪಿಯಿಂದ ಟಿಕೆಟ್‌ ತಪ್ಪಿಸುವುದಕ್ಕೆ ಬಿಜೆಪಿಯ ಒಳಗಿನ ಕೆಲವರು ಶತಪ್ರಯತ್ನ ಮಾಡುತ್ತಿದ್ದು, ಇದೇ ಕಾರಣದಿಂದ ಹಲವರ ಹೆಸರನ್ನು ಮನ್ನಲೆಗೆ ತರುವ ಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ನಳಿನ್‌ ಬೇಡವೇ ಬೇಡ ಎಂಬ ಅಭಿಪ್ರಾಯ: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸಂಸದ ನಳಿನ್‌ ವಿರುದ್ಧ ಮಡುಗಟ್ಟಿದ ಆಕ್ರೋಶವಿದೆ. ಕಾರ್ಯಕರ್ತರೊಂದಿಗೆ ಉಡಾಫೆ ವರ್ತನೆ, ತಾನು ಮಾಡಿದ್ದೇ ಸರಿ ಎನ್ನುವ ಅಹಂಭಾವ ಅವರಿಗೆ ಮುಳುವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಸ್ವ ಕ್ಷೇತ್ರವನ್ನು ನಿರ್ಲಕ್ಷ ಮಾಡಿರುವುದು ಬಹಿರಂಗ ಸತ್ಯ. ಮೊದಲು ಸಂಘಟನೆಗೆ ಹೆಸರಾಗಿದ್ದ ನಳಿನ್‌ ಈಗ ಸ್ವ ಕ್ಷೇತ್ರದ ಕಾರ್ಯಕರ್ತರೊಂದಿಗೆ ಒಡನಾಟವನ್ನೇ ಇಟ್ಟುಕೊಂಡಿಲ್ಲ ಎಂಬ ಆರೋಪವಿದೆ. ಪ್ರವೀಣ್‌ ಹತ್ಯೆ ನಡೆದಾಗ ಕಾರ್ಯಕರ್ತರ ಮಡುಗಟ್ಟಿದ ಆಕ್ರೋಶ ಕಾರು ಎತ್ತಿಹಾಕುವ ಮೂಲಕ ವ್ಯಕ್ತವಾಗಿತ್ತು.

ಪುತ್ತಿಲ ಲೋಕಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಪುತ್ತಿಲರಿಗೆ ಬಿಜೆಪಿಯಿಂದ ಟಿಕೆಟ್‌ ತಪ್ಪಿಸುವುದಕ್ಕೆ ಬಿಜೆಪಿಯ ಒಳಗಿನ ಕೆಲವರು ಪ್ರಯತ್ನ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಹೆಸರುಗಳು ತೇಲಿ ಬರುತ್ತಿವೆ. ಕ್ಯಾ. ಬ್ರಿಜೇಶ್‌ ಚೌಟ, ಅರುಣ್‌ ಶಾಮ್‌ ಮೊದಲಾದವರು ಈ ಸಾಲಿನಲ್ಲಿದ್ದಾರೆ.

ಅರುಣ್‌ ಶಾಮ್‌ ಯಾರು: ಅರುಣ್ ಶ್ಯಾಮ್ ಪ್ರಭಾವಿ ವಕೀಲರಾಗಿದ್ದಾರೆ. ಹಲವಾರು ಕೇಸ್‌ಗಳಲ್ಲಿ ಮಠಗಳು ಸೇರಿದಂತೆ ಹಲವು ಪ್ರಭಾವಿ ನಾಯಕರ ಪರ ವಾದಿಸಿದವರು. ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್‌, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ರಂತಹ ನಾಯಕರ ಆತ್ಮೀಯರಾಗಿದ್ದು ಅವರ ಆಶೀರ್ವಾದವಿದೆ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಒಡನಾಟ ಚೆನ್ನಾಗಿದೆ. ಹವ್ಯಕ ಸಮುದಾಯದ ಅರುಣ್ ಶ್ಯಾಮ್ ಅವರಿಗೆ ಅವಕಾಶ ನೀಡಿದರೆ ಹೇಗೆ ಅನ್ನುವಂತಹ ಚರ್ಚೆಗಳು ಬಿಜೆಪಿಯೊಳಗೆ ನಡೆಯುತ್ತಿವೆ.

ಅರುಣ್ ಶ್ಯಾಮ್ ಅವರು ಎಂ. ಈಶ್ವರ ಭಟ್ ಮತ್ತು ಕುಸುಮ ಈಶ್ವರ ಭಟ್‌ರವರ ಪುತ್ರರಾಗಿದ್ದಾರೆ. ಮೂಲತ ಕೊಳ್ನಾಡು ಗ್ರಾಮದ ಪಂಜಿಗದ್ದೆ ನಿವಾಸಿ ಆಗಿರುವ ಅರುಣ್ ಶ್ಯಾಮ್ ಅವರು 2006ರಲ್ಲಿ ಪುತ್ತೂರಿನ ಈಶ್ವರಮಂಗಲ ನಿವಾಸಿ ಕೆ.ಎಂ. ನಟರಾಜ್ ಅವರ ಜೊತೆ ಬೆಂಗಳೂರು ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಮುಂದೆ ಸ್ವಂತ ಕಚೇರಿ ಆರಂಭಿಸಿ ವಕೀಲಿ ವೃತ್ತಿ ಮುಂದುವರಿಸಿದ್ದರು. ಅರುಣ್‌ಶ್ಯಾಮ್ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಕಾರ್ಯಕರ್ತರ ಬಲದಿಂದಲೇ ಮೇಲೆ ಬಂದಿರುವ ಅರುಣ್ ಪುತ್ತಿಲಗೆ ದೊಡ್ಡ ಅಭಿಮಾನಿ ಬಳಗವಿದೆ. ಅರುಣ್ ಪುತ್ತಿಲಗೆ ಟಿಕೆಟ್‌ ಕೊಡಬೇಕು ಅನ್ನುವ ಒತ್ತಾಯವೂ ಇದೆ. ಆದರೆ ಪ್ರಭಾವಿಗಳ ಒಡನಾಟ ಹೊಂದಿದ ಹಾಗೂ ಸಂಘ ಪರಿವಾರದ ಒತ್ತಡದಿಂದಾಗಿ ಕೊನೆಗಳಿಗೆಯಲ್ಲಿ ಅರುಣ್‌ಶ್ಯಾಮ್ ಗೆ ಟಿಕೆಟ್ ಲಭಿಸಿದರೂ ಅಚ್ಚರಿ ಇಲ್ಲ ಅನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಂದು ವೇಳೆ ಅರುಣ್ ಪುತ್ತಿಲಗೆ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್‌ ಸಿಗದಿದ್ದರೆ ಅವರು ಮತ್ತೆ ಪಕ್ಷೇತರರಾಗಿ ಕಣಕ್ಕೆ ಇಳಿಯಬಹುದು. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣಾ ಕಣ ರೋಚಕತೆಯನ್ನು ಪಡೆದುಕೊಳ್ಳುತ್ತದೆ.

ಬ್ರಿಜೇಶ್‌ ಚೌಟ: ಸೇನೆ ಸೇವೆ ಸಲ್ಲಿಸಿ ಇದೀಗ ಬಿಜೆಪಿ ನಾಯಕರಾಗಿರುವ ಕ್ಯಾ. ಬ್ರಿಜೇಶ್‌ ಚೌಟ ಬಿಜೆಪಿಯಿಂದ ತೇಲಿಬಂದಿರುವ ಮತ್ತೊಂದು ಹೆಸರು. ಮೊನ್ನೆ ಮೊನ್ನೆಯಷ್ಟೇ ಪುತ್ತೂರು ದೇವಳವೊಂದಕ್ಕೆ ಭೇಟಿ ನೀಡಿದ್ದು, ಚರ್ಚೆಯಾಗಿತ್ತು. ಈ ನಿಟ್ಟಿನಲ್ಲಿ ಸಂಸತ್‌ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಬೈಂದೂರು ಕ್ಷೇತ್ರದ ಬರಿಗಾಲ ಸಂತ, ಶಾಸಕ ಗುರುರಾಜ ಗಂಟಿ ಹೊಳೆ ಪರ ಪ್ರಚಾರಕ್ಕೆ ಸಾಥ್‌ ಕೊಟ್ಟು ಶ್ರಮಿಸಿರುವುದು ಬಿಜೆಪಿ ಮುಖಂಡರಲ್ಲಿ ಇವರ ಮೇಲಿನ ವಿಶ್ವಾಸ ಹೆಚ್ಚಿಸಿರುವುದು ಸುಳ್ಳಲ್ಲ. ಹೀಗಾಗಿ ಬಿಜೆಪಿ ದಕ್ಷಿಣ ಕನ್ನಡ ಕ್ಷೇತ್ರದ ಟಿಕೇಟ್‌ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು