ಕೊಪ್ಪಳ: ಸಾಮಾಜಿಕ ಜಾಲತಾಣದಲ್ಲಿ ವೀರ ಸಾವರ್ಕರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಹುಸೇನಸಾಬ ಕೊಳ್ಳಿ ಎಂಬಾತನನ್ನು ಬಂಧಿಸಲಾಗಿದೆ. ಈತ ಕೊಪ್ಪಳದವನಾಗಿದ್ದು, ಕೊಪ್ಪಳ ಜಿಲ್ಲೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad
ಕುಷ್ಟಗಿ ತಾಲೂಕಿನ ದೋಟಿಹಾಳದ ಹುಸೇನಸಾಬ ಕೊಳ್ಳಿ ಎಂಬಾತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಈತ ಫೇಸ್‌ಬುಕ್ ಖಾತೆಯಲ್ಲಿ, ಸಾವರ್ಕರ್ ಫೋಟೋ ಹಾಕಿ, “ಸಾವರ್ಕರ್ ದೇಶದ ಮೊದಲ ಟೆರರಿಸ್ಟ್” ಎಂದು ಬರೆದಿದ್ದ. ʼರಣಹೇಡಿ ಸಾವರ್ಕರ್ʼ ಎಂದೂ ಬರೆದಿದ್ದಾನೆ.
Ad
ಈತ ತನ್ನ ಎಫ್‌ಬಿ ಖಾತೆಯ ಹೆಸರನ್ನು ʼಟಿಪ್ಪು ಟಿಪ್ಪುʼ ಎಂದು ಇಟ್ಟುಕೊಂಡಿದ್ದಾನೆ. ಹಲವು ಕೋಮು ಭಾವನೆ ಕೆರಳಿಸುವ ಪೋಸ್ಟ್‌ಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
Ad
Ad