Bengaluru 24°C
Ad

ದೈವದ ಕಾರ್ಯನಿಮಿತ್ತ ಕಾಡಿಗೆ ತೆರಳಿ ನಾಪತ್ತೆ ಆಗಿದ್ದ ವೃದ್ಧ; ಬದುಕಿ ಬಂದಿದ್ದೇ ಪವಾಡ

Ajja

ಬೆಳ್ತಂಗಡಿ : ದಟ್ಟಡವಿಯಲ್ಲಿ ನಾಪತ್ತೆಯಾದ ಎಂಭತ್ತೆರಡರ ಹರೆಯದ ಅಜ್ಜ, ಆರು ದಿನಗಳ ಬಳಿಕ ಕಾಡಿನಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ನಡೆದಿದೆ. ಹಸಿವು ಭಯವನ್ನು ಮೆಟ್ಟಿ ನಿಂತು ಸಾವಿನ ಜೊತೆ ಹೋರಾಡಿದ ಅಜ್ಜನ ಹೆಸರು ವಾಸುರಾಣ್ಯ. ಕಾಡು ಜೀವನದ ಒಂದು ಅಂಗವಾಗಿದ್ದ ವಾಸುರಾಣ್ಯ ಅವರು ಮೇ 21 ರಂದು ದೈವದ ಕಾರ್ಯ ನಿಮಿತ್ತ ಕಟ್ಟಿಗೆಗೆ ಕಾಡಿಗೆ ತೆರಳಿದ್ದರು. ಕಾಡಿಗೆ ತೆರಳಿದ ಮೇಲೆ ಬಂದ ವಾಸು ಅವರಿಗೆ ಬಂದ ದಾರಿ ಮರೆವು ಆಗಿದೆ.

ವಾಸುರಾಣ್ಯ ಸುಮಾರು ಗಂಟೆಗಳ ಕಾಲ ಕಾಡಿನಲ್ಲೇ ತಿರುಗಾಡಿದರೂ ವಾಸಯರಾಣ್ಯ ಅವರಿಗೆ ದಾರಿ ಕಾಣಲಿಲ್ಲ. ಕಾಡಿನಲ್ಲೇ ದಾರಿ ಕಾಣಲಾಗದೇ ಪರದಾಡಿದ್ದಾರೆ. ಹೀಗೆ ಆರು ದಿನ ಅನ್ನಾಹಾರ ಇಲ್ಲದೇ ಕಳೆದಿದ್ದಾರೆ. ಆಹಾರ ಇಲ್ಲದಿದ್ದರೂ ಆತ್ಮಸ್ಥೈರ್ಯ ಮತ್ತು ಧೈರ್ಯದಿಂದ ವಾಸುರಾಣ್ಯ ಜೀವಂತವಾಗಿ ಮನೆಗೆ ಸೇರಿದ್ದಾರೆ. ಮೇ 21 ರಿಂದ ಮೇ 26 ರವರೆಗೆ ಕಾಡಿನಲ್ಲೇ ಇದ್ದ ವಾಸುರಾಣ್ಯ, ಭಾರೀ ಮಳೆ, ಜಿಗಣೆ, ಕಾಡುಪ್ರಾಣಿಗಳ ನಡುವೆ ಆರು ದಿನ ರಾತ್ರಿ ಕಳೆದಿದ್ದಾರೆ.

ಮರದಡಿಯಲ್ಲೇ ದಟ್ಟಡವಿಯಲ್ಲೇ ರಾತ್ರಿ ಕಳೆದ ವೃದ್ಧ ವಾಸುರಾಣ್ಯ ಅವರ ಪತ್ತೆಗೆ ಅವಿನಾಶ್ ಭಿಡೆ ನೇತೃತ್ವದ ಶೌರ್ಯ ವಿಪತ್ತು ನಿರ್ವಹಣಾ ತಂಡ ಸತತ ಹುಡುಕಾಟ ನಡೆಸಿದೆ.

ಗಟ್ಟಿಹೃದಯದ ವಾಸು ಅವರು ದೊಡ್ಡ ಬಂಡೆಯ ಮೇಲೆ ತೆರಳಿ ಕೂಗಿದಾಗ ಆ ಕೂಗಿನ ಮೊರೆತ ಶೌರ್ಯ ತಂಡದ ಕಿವಿಗೆ ಮುಟ್ಟಿದೆ. ಧ್ವನಿಯನ್ನೇ ಹಿಂಬಾಲಿಸಿ ಬಂದ ತಂಡಕ್ಕೆ ಮರದ ಎಡೆಯಲ್ಲಿ ನಿಂತ ವಾಸು ಅವರು ಕಾಣಸಿಕ್ಕಿದ್ದಾರೆ.

ಸತತ 6 ದಿನಗಳ ಕಾಲ ಆಹಾರ, ನಿದ್ರೆ ಇಲ್ಲದೇ, ಭಯ, ಆತಂಕಕ್ಕೆ ಒಳಗಾಗದೇ ಕಾಡಲ್ಲಿ ಇದ್ದ ವಾಸು ಅವರು ಜೀವನ ಧೈರ್ಯ ಕಂಡು ಎಲ್ಲರೂ ಆಶ್ಚರ್ಯರಾಗಿದ್ದಾರೆ. ಇಷ್ಟಾಗ್ಯೂ ವಾಸು ಅವರು ಹೇಳೋದು ನನ್ನ ದೈವವೇ ನನ್ನನ್ನು ಕಾಪಾಡಿದೆ ಎಂದು.

 

 

Ad
Ad
Nk Channel Final 21 09 2023
Ad