Bengaluru 28°C
Ad

ಚೆಸ್‌ ಚತುರ ಆರ್​. ಪ್ರಜ್ಞಾನಂದನಿಗೆ ಮತ್ತೊಮ್ಮೆ ಒಲಿದು ಬಂದ ಜಯ

ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್‌ಸೆನ್ಅವರನ್ನು ಸೋಲಿಸುವುದರ ಮೂಲಕ ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ಗೇಮ್​ನ ಮೂರನೇ ಸುತ್ತಿನಲ್ಲಿ ಕಾರ್ಲ್​ಸೆನ್ ವಿರುದ್ಧ ಗೆಲ್ಲುವ ಮೂಲಕ ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್‌ಸೆನ್ಅವರನ್ನು ಸೋಲಿಸುವುದರ ಮೂಲಕ ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ಗೇಮ್​ನ ಮೂರನೇ ಸುತ್ತಿನಲ್ಲಿ ಕಾರ್ಲ್​ಸೆನ್ ವಿರುದ್ಧ ಗೆಲ್ಲುವ ಮೂಲಕ ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ 2023 ರಲ್ಲಿ ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್​ನಲ್ಲಿ ಆರ್​. ಪ್ರಜ್ಞಾನಂದ ವಿರುದ್ಧ ಮ್ಯಾಗ್ನಸ್ ಕಾರ್ಲ್‌ಸೆನ್ ಜಯ ಸಾಧಿಸಿದ್ದರು.

ಇದೀಗ ಕ್ಲಾಸಿಕಲ್ ಗೇಮ್​ನಲ್ಲಿ ಮೊದಲ ಬಾರಿಗೆ ಮ್ಯಾಗ್ನಸ್ ಕಾರ್ಲ್‌ಸೆನ್​ಗೆ ಸೋಲುಣಿಸುವಲ್ಲಿ ಆರ್​. ಪ್ರಜ್ಞಾನಂದ ಯಶಸ್ವಿಯಾಗಿದ್ದಾರೆ. ಈ ಮೂಲಕ ಹಳೆಯ ಸೋಲಿನ ಲೆಕ್ಕ ಚುಕ್ತಾ ಮಾಡಿದ್ದಾರೆ. ಹಾಗೆಯೇ ಈ ಗೆಲುವಿನೊಂದಿಗೆ ಪ್ರಜ್ಞಾನಂದ ಮುನ್ನಡೆ ಸಾಧಿಸಿದರೆ, ಕಾರ್ಲ್​ಸೆನ್ ಹಿನ್ನಡೆ ಅನುಭವಿಸಿದ್ದಾರೆ.

ಅದರಂತೆ ಪ್ರಜ್ಞಾನಂದ 9 ಅಂಕಗಳಲ್ಲಿ 5.5 ಪಾಯಿಂಟ್ಸ್​ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯೊ ಕರುವಾನಾ ಅವರು ಬುಧವಾರ ಜಿಎಂ ಡಿಂಗ್ ಲಿರೆನ್ ವಿರುದ್ಧ ಗೆದ್ದ ನಂತರ ಮೂರು ಪೂರ್ಣ ಅಂಕಗಳನ್ನು ಪಡೆದು ಎರಡನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಮ್ಯಾಗ್ನಸ್ ಕಾರ್ಲ್‌ಸೆನ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

Ad
Ad
Nk Channel Final 21 09 2023
Ad