News Karnataka Kannada
Thursday, April 18 2024
Cricket
ಮಂಗಳೂರು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪ್ಲಸ್, ಮೈನಸ್ ಪಾಯಿಂಟ್‌

Bjp
Photo Credit : News Kannada

ಮಂಗಳೂರು: ದೈವಾರಾದನೆ ನೆಲೆ ಬೀಡಾದ ರಾಜ್ಯದ ಕಡಲನಗರಿ ಎಂದೇ ಕರೆಯಲ್ಪಡುವ ಮಂಗಳೂರು ಬಹಳ ವಿಶೇಷತೆಯಿಂದ ಕೂಡಿದೆ. ರಸ್ತೆ ಸಾರಿಗೆ, ವಾಯು ಸಾರಿಗೆ, ಜಲ ಸಾರಿಗೆ, ರೈಲು ಸಾರಿಗೆ ಇರುವ ರಾಜ್ಯದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಪಾತ್ರವಾಗಿದೆ.

ಇಲ್ಲಿ ರಾಜಕೀಯ ಬದುಕು ನೋಡುವುದಾದರೇ, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಭದ್ರ ಕೋಟೆಯಾಗಿದೆ. ಇಲ್ಲಿ ಮೂರು ಬಾರಿ ನಳಿನ್ ಕುಮಾರ್ ಕಟೀಲು ಹ್ಯಾಟ್ರಿಕ್ ಜಯಗಳಿಸಿದ್ದಾರೆ. ಬಿಜೆಪಿಯಿಂದ ಯಾರು ನಿಂತರೂ ಗೆಲ್ಲುತ್ತಾರೆ ಎನ್ನುವಷ್ಟು ಮಟ್ಟಿಗೆ ಬಿಜೆಪಿಗೆ ಪ್ಲಸ್ ಇರುವ ಕ್ಷೇತ್ರ ಅಂದ್ರೆ ಅದು ದಕ್ಷಿಣ ಕನ್ನಡ.

ಇಲ್ಲಿ ಒಟ್ಟು ಮತದಾರರ ಸಂಖ್ಯೆ- 18,97,417 ಇದೆ. ಇದರಲ್ಲಿ ಪುರುಷರು- 9,30,567 ಇದ್ದರೆ, ಮಹಿಳೆಯರು- 9,66,850 ಇದ್ದಾರೆ.

ರಾಜಕೀಯ ಚಟುವಟಿಕೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಪ್ಲಸ್ ಪಾಯಿಂಟ್‌ ನೋಡುವುದಾದರೇ, ಹಿಂದುತ್ವದ ಭದ್ರ ಕೋಟೆ, ಪ್ರಧಾನಿ ಮೋದಿ ಮೇಲಿರುವ ಪರವಾದ ಅಭಿಮಾನ, ಅಯೋಧ್ಯೆಯ ರಾಮ ಮಂದಿರ ನನಸಾಗಿದ್ದು, ಹಿಂದೂ ಮತ ನಿರ್ಣಾಯಕ ಹಾಗು ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತರ ಶ್ರಮ

ಅಷ್ಟೇ ಅಲ್ಲದೆ ಬಿಜೆಪಿಯ ಮೈನಸ್ ಪಾಯಿಂಟ್‌ ನೋಡುವುದಾದರೇ, ಸಂಸದ ನಳಿನ್ ಕುಮಾರ್ ಬಗ್ಗೆ ಕರಾವಳಿಗರಿರುವ ಅಸಮಾಧಾನ, ನಳಿನ್ ಅಧಿಕಾರ ಅವಧಿಯಲ್ಲಿ ವರ್ಷದಲ್ಲಿ ಗಮನಾರ್ಹ ಯೋಜನೆ ಆಗದ್ದೇ ಇದ್ದ್ದು, ತಳಮಟ್ಟದ ಕಾರ್ಯಕರ್ತರಲ್ಲಿ ನಳಿನ್ ವಿರುದ್ಧ ಅಸಮಾಧಾನ., ಸಮರ್ಥ ಅಭ್ಯರ್ಥಿಗಾಗಿ ಕ್ಯಾಂಪೇನ್, ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಹಾಗು ಪುತ್ತಿಲ ಪರಿವಾರ ಹುಟ್ಟಿಕೊಂಡಿರುವುದು.

ಇತ್ತ ಬಿಜೆಪಿಯಂತೆ ಕಾಂಗ್ರೆಸ್ ಪಕ್ಷದ ಪ್ಲಸ್ ಪಾಯಿಂಟ್‌ ನೋಡುವುದಾದರೇ,
ನಳಿನ್ ಕುಮಾರ್ ಬಗ್ಗೆ ವಿರೋಧ ಅಲೆ ಮತವಾಗಿ ಮಾರ್ಪಾಟು ನಿರೀಕ್ಷೆ, ಗ್ಯಾರಂಟಿ ಯೋಜನೆಗಳ ಲಾಭದ ನಿರೀಕ್ಷೆ., ಮುಸ್ಲಿಂ ಮತಗಳ ಕ್ರೋಢಿಕರಣ, ಹದಿನೈದು ವರ್ಷದಲ್ಲಿ ಅಭಿವೃದ್ಧಿ ಆಗದ ವಿಚಾರ ಚುನಾವಣಾ ಅಸ್ತ್ರ ಹಾಗು ಸಾಫ್ಟ್ ಹಿಂದುತ್ವ ಧೋರಣೆ

ಕಾಂಗ್ರೆಸ್ ಮೈನಸ್ ಪಾಯಿಂಟ್‌ ಹೇಳುವುದಾದರೇ, ಮೋದಿ ಹೆಸರಲ್ಲಿ ಲೋಕಸಭಾ ಚುನಾವಣೆ, ಇನ್ನು ಕೂಡ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಇರುವ ಗೊಂದಲ, ಪ್ರಬಲ ಹಿಂದುತ್ವದ ಅಲೆ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಗೆಲುವು ಹಾಗು ಮೋದಿ ಅಲೆಯ ಎದುರು ಗೆಲ್ಲೋದು ಅಸಾಧ್ಯ ಎಂಬ ಭಾವನೆ ಇರುವುದು.

ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರದ ಬಲಾಬಲ ಹೀಗಿದೆ
ಮಂಗಳೂರು ದಕ್ಷಿಣ ; ವೇದವ್ಯಾಸ ಕಾಮತ್ ( ಬಿಜೆಪಿ)
ಮಂಗಳೂರು ಉತ್ತರ ; ಭರತ್ ಶೆಟ್ಟಿ (ಬಿಜೆಪಿ)
ಬಂಟ್ವಾಳ ; ರಾಜೇಶ್ ನಾಯಕ್ ( ಬಿಜೆಪಿ)
ಬೆಳ್ತಂಗಡಿ ; ಹರೀಶ್ ಪೂಂಜಾ ( ಬಿಜೆಪಿ)
ಸುಳ್ಯ ಭಾಗೀರಥಿ ಮುರುಳ್ಯಾ (ಬಿಜೆಪಿ)
ಪುತ್ತೂರು ; ಅಶೋಕ್ ರೈ (ಕಾಂಗ್ರೆಸ್)
ಉಳ್ಳಾಲ ; ಯು. ಟಿ ಖಾದರ್ ( ಕಾಂಗ್ರೆಸ್)

2019ರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಭರ್ಜರಿ ಗೆಲುವು ದಾಖಲಿಸಿದ್ದರು. ಮಿಥುನ್ ರೈ ವಿರುದ್ಧ ಕಟೀಲ್ 2,74,621 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದರು.

ನಳಿನ್ ಕುಮಾರ್ ಕಟೀಲ್- 772754 ಮತ ಪಡೆದರೆ, ಮಿಥುನ್ ಎಂ.ರೈ- 499387 ಮತ ಪಡೆದಿದ್ದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ ಹೀಗಿದೆ. .

ಬಿಲ್ಲವ-3.60 ಲಕ್ಷ
ಮುಸ್ಲಿಂ-3.50 ಲಕ್ಷ
ಎಸ್ಸಿ,ಎಸ್ ಟಿ- 2.80 ಲಕ್ಷ
ಗೌಡ -2 ಲಕ್ಷ
ಬಂಟ್ಸ್-1.25 ಲಕ್ಷ
ಕ್ರಿಶ್ಚಿಯನ್ -1 ಲಕ್ಷ
ಬ್ರಾಹ್ಮಣ -1 ಲಕ್ಷ
ಕೊಂಕಣಿ 1 ಲಕ್ಷ
ಇತರ -3.50 ಲಕ್ಷ

ಇನ್ನು ಅಧಿಕಾರದಲ್ಲಿರೋ ಕಾಂಗ್ರೆಸ್ ಈ ಬಾರಿ ಶತಾಗತಯ ಬಿಜೆಪಿಯ ಭದ್ರಕೋಟೆ ಮೇಲೆ ಹಸ್ತದ ಬಾವುಟ ಹಾರಿಸಲು ಸಿದ್ಧತೆ ನಡೆಸುತ್ತಿದೆ. ಇನ್ನು ಜೆಡಿಎಸ್ ಇಲ್ಲಿ ಯಾವುದೇ ಪ್ರಾಬಲ್ಯ ಹೊಂದಿರದ ಕಾರಣ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

ದಕ್ಷಿಣ ಕನ್ನಡ ಹಿಂದೆ ಮಂಗಳೂರು ಲೋಕಸಭಾ ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಇದಕ್ಕೂ ಮುನ್ನ ಇದ್ದ ಮಂಗಳೂರು ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಎಲ್ಲಾ ಭಾಗಗಳು ಒಳಗೊಂಡಿರಲಿಲ್ಲ. ಕೆಲವು ಪ್ರದೇಶಗಳು ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ, ಇನ್ನು ಕೆಲವು ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಇದೀಗ ದಕ್ಷಿಣ ಕನ್ನಡದ ಎಲ್ಲಾ ಭೂಭಾಗಗಳನ್ನು ಇದು ಒಳಗೊಂಡಿದ್ದು, ಪೂರ್ಣ ಜಿಲ್ಲೆಗೆ ಒಂದು ಕ್ಷೇತ್ರವಾಗಿದೆ.

2008ಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರ ಚಿಕ್ಕಮಗಳೂರು ಜೊತೆಗೂ, ಬಂಟ್ವಾಳ, ಮೂಡಬಿದಿರೆ ಹಾಗೂ ಹಿಂದಿನ ಸುರತ್ಕಲ್‌ ಕ್ಷೇತ್ರ ಉಡುಪಿ ಕ್ಷೇತ್ರದ ಜೊತೆಗಿತ್ತು. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಸೇರಿದಂತೆ ಪೂರ್ತಿ ಕೊಡಗು ಮಂಗಳೂರು ಎಂದು ಹೆಸರಾಗಿದ್ದ ಈ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು.

ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಇದೀಗ ಪೂರ್ತಿ ದಕ್ಷಿಣ ಕನ್ನಡ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಬೆಳ್ತಂಗಡಿ, ಮೂಡಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ಕ್ಷೇತ್ರಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಇದರಲ್ಲಿ ಮಂಗಳೂರು (ಯುಟಿ ಖಾದರ್‌) ಮತ್ತು ಪುತ್ತೂರಿನಲ್ಲಿ (ಅಶೋಕ್‌ ರೈ) ಮಾತ್ರ ಕಾಂಗ್ರೆಸ್‌ ಶಾಸಕರಿದ್ದು ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೊಸ ಮುಖವಾಗಿ ಯುವ ನಾಯಕ ಮಿಥುನ್‌ ರೈಗೆ ಮಣೆ ಹಾಕಿತ್ತು. ಆದರೆ ಅವರಿಂದಲೂ ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಒಡ್ಡಲು ಸಾಧ್ಯವಾಗಿರಲಿಲ್ಲ.

ಈ ಚುನಾವಣೆಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ 7,74,285 ಮತ ಗಳಿಸಿದರೆ, ಮಿಥುನ್‌ ರೈ 4,99,664 ಮತಗಳಿಸಿದ್ದರು. ಶೇ. 57.57ರಷ್ಟು ಭಾರೀ ಮತ ಗಳಿಸಿದ್ದ ನಳಿನ್‌ ಕುಮಾರ್‌ ಕಟೀಲ್‌ 2,74,621 ಮತಗಳ ಭರ್ಜರಿ ಅಂತರದಿಂದ ಮಿಥುನ್‌ ರೈಯನ್ನು ಸೋಲಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು