News Karnataka Kannada
Sunday, April 21 2024
Cricket
ಕಲಬುರಗಿ

ಸಾರ್ವಜನಿಕರಿಗೆ ಮರ್ಯಾದೆ ನೀಡದ ಅರಣ್ಯ ಇಲಾಖೆಯ ನೌಕರ ಶ್ರೀಕಾಂತ ಅಮಾನತಿಗೆ ದಲಿತ ಸೇನೆ ಆಗ್ರಹ

ಕರ್ನಾಟಕದ ಗಥ ವೈಭವ ಸಾರುವ ಮತ್ತು ಪರಸರ ಸಂರಕ್ಷಿಸುವ ಅರಣ್ಯ ಇಲಾಖೆಯು ಜನಸ್ನೇಹಿಯಾಗಿ ಕೆಲಸ ಮಾಡುವುದರಲ್ಲಿ ಎರಡು ಮಾತಿಲ್ಲ.ಏಕೆಂದರೆ ಯಾವುದೇ ಒಂದು ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ, ಸಾರ್ವಜನಿಕರ ಸಹಕಾರ ಬಹುಮುಖ್ಯವಾಗುತ್ತದೆ.
Photo Credit : News Kannada

ಕಲಬುರಗಿ: ಕರ್ನಾಟಕದ ಗಥ ವೈಭವ ಸಾರುವ ಮತ್ತು ಪರಸರ ಸಂರಕ್ಷಿಸುವ ಅರಣ್ಯ ಇಲಾಖೆಯು ಜನಸ್ನೇಹಿಯಾಗಿ ಕೆಲಸ ಮಾಡುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಯಾವುದೇ ಒಂದು ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ, ಸಾರ್ವಜನಿಕರ ಸಹಕಾರ ಬಹುಮುಖ್ಯವಾಗುತ್ತದೆ. ಆದರೆ ಕಲಬುರಗಿ ಅರಣ್ಯ ಭವನದಲ್ಲೊಬ್ಬ ಚಾಲಾಕಿ ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ ಸಾರ್ವಜನಿಕರು ಕಚೇರಿಗೆ ಬಂದರೆ ಸಾಕು ಬೇಜವಾಬ್ದಾರಿಯಿಂದ ಪ್ರತಿಕ್ರಿಯೆಸುವುದಲ್ಲದೆ, ಏಕವಚನ ಪದಬಳಕೆ ಮಾಡುತ್ತಾನೆ ಎಂದು ದಲಿತ ಸೇನೆ ಅಧ್ಯಕ್ಷ ಮಹಾಂತೇಶ ಬಳೂಂಡಗಿ ಆರೋಪಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಜಿಲ್ಲಾ ಅರಣ್ಯ ಅಧಿಕಾರಿಗಳ ಸೌಜನ್ಯ ಭೇಟಿಗಾಗಿ ಬಂದ ನನಗೆ ನೀನು ಯಾರು? ಇಲ್ಲಿ ನಮ್ಮ ಸಂಭಂದಿಕರು ಬಂದರೆ ಮಾತ್ರ ಅವರಿಗೆ ಸ್ಪಂದಿಸುವೆ ಮತ್ತು ಅವರೊಂದಿಗೆ ಮಾತಾಡುತ್ತೆನೆ ಎನ್ನುವುದಲ್ಲದೆ ಕಚೇರಿಯಿಂದ ಹೊರನಡೆ ಎಂದು ಏಕ ವಚನದಲ್ಲಿ ಪದ ಬಳಕೆ ಮಾಡಿದ್ದಾರೆ. ಅದಲ್ಲದೇ ಇಲಾಖೆಯಲ್ಲಿದ್ದು,ಇಲಾಖೆಯ ಗುಪ್ತ ಮಾಹಿತಿಯನ್ನು ತಮ್ಮ ಹಿತೈಷಿಗಳಿಗೆ ನೀಡಿ. ಅರಣ್ಯ ಇಲಾಖೆಯಲ್ಲಿ ನಿಯತ್ತಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ತೊದರೆ ಕೊಡುತ್ತಾನೆ. ಒಂದು ದಿನವು ಕಚೇರಿಯ ಪ್ರಾರಂಭದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ, ಕಚೇರಿಯ ಹೊರಗೆ ಕಾಲಹರಣ ಮಾಡುತ್ತಾನೆ. ಹಿಂತಹ ಇಲಾಖೆಯ ದ್ರೋಹಿಗಳನ್ನು ಕೂಡಲೇ ಅಮಾನತ್ತು ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.ಒಂದು ವೇಳೆ ಪ್ರಥಮ ದರ್ಜೇ ಸಹಾಯಕ ಶ್ರೀಕಾಂತನನ್ನು ಅಮಾನತ್ತು ಮಾಡಿ ಸೂಕ್ತ ತನಿಖೆಗೆ ಒಳಪಡಿಸದಿದ್ದರೆ,ಜಿಲ್ಲಾ ಅರಣ್ಯ ಭವನದ ಎದುರು ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದರು.

ನಂತರ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗುರುದೇವ, ನಮ್ಮ ನಾಡು ಕನ್ನಡ ನಾಡು ಗಂಧದ ಬಿಡು ಎಂಬ ಖ್ಯಾತಿ ಪಡೆದಿದ್ದು,ಅರಣ್ಯ ಇಲಾಖೆಯ ಪರಿಶ್ರಮದಿಂದ. ಅದರ ಸಂರಕ್ಷಣೆ ಮತ್ತು ಅದರ ಬಗ್ಗೆ ಅತೀವ ಸಂವೇದನೆ ಮಾಡುವವರು ಅರಣ್ಯ ಇಲಾಖೆಯವರಾಗಿದ್ದು.ಕಲ್ಯಾಣ ಕರ್ನಾಟಕ ಭಾಗವನ್ನು ಉತ್ತರ ಕನ್ನಡ ಭಾಗಕ್ಕೆ ಹೋಲಿಸಿದರೆ ಅರಣ್ಯ ಪ್ರದೇಶ ಕಡಿಮೆ ಇದ್ದು, ಅರಣ್ಯ ಪ್ರದೇಶ ಹೆಚ್ಚಳಕ್ಕೆ ಇಲಾಖೆಯ ಪರಿಶ್ರಮ ಮೆಚ್ಚುವಂತಹದ್ದಾಗಿದೆ. ಜಿಲ್ಲೆಯ ಮೇಲ್ದರ್ಜೆಯ ಅಧಿಕಾರಿಗಳು ಅರಣ್ಯ ಬೆಳೆಸುವುದರಲ್ಲಿ ಗಮನ ಹರಿಸುತ್ತಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಹೆಡ್ ಕ್ವಾಟರ ಕಲಬುರಗಿ ಅರಣ್ಯ ಭವನದಲ್ಲಿ ಎಫ್ ಡಿ.ಎ ಆಗಿ ಕಾರ್ಯನಿರ್ವಹಿಸುವ ಶ್ರೀಕಾಂತ ಅವರು ಅರಣ್ಯ ಇಲಾಖೆಯಲ್ಲಿದ್ದು ಅರಣ್ಯ ರಕ್ಷಕರಾಗದೆ ಅರಣ್ಯ ಇಲಾಖೆಯ ಅಧಿಕಾರಿಗಳ ಜೀವ ಹಿಂಡುವ ಭಕ್ಷಕರಾಗಿದ್ದಾರೆ.

ಅರಣ್ಯ ಭವನಕ್ಕೆ ನಾನು ಕೂಡಾ ಭೇಟಿ ನೀಡಿದ್ದಾಗ ಒಬ್ಬ ಇಲಾಖೆಯ ಕೆಲಸಗಾರನು ನೀಡುವ ಗೌರವ ಮತ್ತು ಸೌಜನ್ಯವು ಕೂಡಾ ಇವರು ನೀಡದೆ.ನಮಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ಮೊದಲು ಶ್ರೀಕಾಂತ ಅವರು ಕೆಲಸ ಮಾಡುವ ಇಲಾಖೆಯಿಂದ ಅಮಾನತ್ತಾಗಿ ಕಲಬುರಗಿ ಜಿಲ್ಲೆಗೆ ಮತ್ತೆ ಕೆಲಸಕ್ಕೆ ಸೇರಿದ್ದಾರೆ.ಇವರು ಮತ್ತೆ ಅವರ ಹಳೆಯ ಚಾಳಿಯನ್ನು ಮುಂದುವರೆಸುತ್ತಿದ್ದಾರೆ. ಕಲಬುರಗಿ ಜನರು ಏನೆ ಅಂದರು ಅನಿಸಿಕೊಂಡು ಸುಮ್ಮನಿರುತ್ತಾರೆ ಎಂದು ತಮ್ಮ ದರ್ಪ ತೊರಿಸುತ್ತಿದ್ದಾರೆ.ಕೂಡಲೇ ಇವರ ಮೇಲೆ ಸರಕಾರಿ ನೌಕರರ ಕೆ.ಸಿ.ಎಸ್.ಆರ್. ನಿಯಮದ ಪ್ರಕಾರ ದುರ್ನಡತೆ ಆಧಾರದ ಮೇಲೆ ಇಲಾಖೆಯಿಂದ ವಜಾ ಮಾಡಿ ಸೂಕ್ತ ತನಿಖೆಗೆ ಒಳಪಡಿಸಬೇಕು.ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು