Bengaluru 23°C
Ad

ಬೀದರ್​ನ ಸ್ಮಾರಕಗಳಿಗಿಲ್ಲ ಜೀರ್ಣೋದ್ಧಾರ ಕಾರ್ಯ: ಅವನತಿಯತ್ತ ಪ್ರವಾಸಿ ತಾಣಗಳು

ಬೀದರ್ ಜಿಲ್ಲೆ ಐತಿಹಾಸಿಕವಾಗಿ ಇಲ್ಲಿನ ಭವ್ಯ ಸ್ಮಾರಕಗಳಿಂದ ರಾಷ್ಟ್ರಮಟ್ಟದಲ್ಲಿ ತನ್ನ ಗಮನ ಸೆಳೆಯುತ್ತಿದೆ. ಜೊತೆಗೆ ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿದೆ.

ಬೀದರ್​: ಬೀದರ್ ಜಿಲ್ಲೆ ಐತಿಹಾಸಿಕವಾಗಿ ಇಲ್ಲಿನ ಭವ್ಯ ಸ್ಮಾರಕಗಳಿಂದ ರಾಷ್ಟ್ರಮಟ್ಟದಲ್ಲಿ ತನ್ನ ಗಮನ ಸೆಳೆಯುತ್ತಿದೆ. ಜೊತೆಗೆ ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ದಕ್ಷಿಣ ಭಾರತದಲ್ಲಿಯೇ ವಿಸ್ತಾರದಲ್ಲಿ ಬೃಹತ್ತಾದ ಕೋಟೆಯಿಂದ ಜಿಲ್ಲೆ ಕಿರಿಟದಂದೆ ರಾರಾಜಿಸುತ್ತಿದೆ. ಇಷ್ಟಾದರೂ ಕೂಡ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಬವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಅದಕ್ಕೆ ಪ್ರಮುಖವಾಗಿ ಇಲ್ಲಿನ ಐತಿಹಾಸಿಕ ಸ್ಮಾರಕದ ಬಗ್ಗೆ ಜನರಿಗೆ ಮಾಹಿತಿಯ ಕೊರೆತೆ. ಗೈಡ್​ಗಳು ಕೂಡ ಇಲ್ಲ.

ಕರ್ನಾಟಕದ ಕಳಶ, ಸೂಫಿ ಸಂತರ ನಾಡು ಗಡಿ ಜಿಲ್ಲೆ ಬೀದರ್ ಐತಿಹಾಸಿಕ ಸ್ಮಾರಕಗಳಿಂದ ರಾಷ್ಟ್ರದ ಗಮನ ಸೆಳೆಯುತ್ತಿದೆ. ದೇಶದ ಅತೀ ದೊಡ್ಡ ಬೀದರ್ ಕೋಟೆ, ಆರು ಶತಮಾನದಷ್ಟೂ ಹಳೆದಾದ ಬಹುಮನಿ ಸುಲ್ತಾನರ ಕಾಲದ ರಾಜ ಮಹಾರಾಜರ ಘೋರಿಗಳು, ಪುರಾತನವಾದ ದೇವಸ್ಥಾನಗಳಿಂದಾಗಿ ಜಿಲ್ಲೆಯ ಗತವೈಭವವನ್ನ ಸಾರಿ ಸಾರಿ ಹೇಳುತ್ತಿವೆ.

ಪುರಾತತ್ವ ಇಲಾಕೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಇತಿಹಾಸದ ಪುಟ್ಟದಲ್ಲಿ ಅಚ್ಚಳಿಯದೇ ಉಳಿದುಕೊಂಡಿರುವ ಇಲ್ಲಿನ ಪ್ರವಾಸಿ ಸ್ಥಳಗಳು ಇಂದು ತನ್ನ ಕೊನೆಯ ದಿಗಳನ್ನ ಎಣಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿಯೂ ಕೂಡ ಗಣೀನಿಯ ಪ್ರಮಾಣದಲ್ಲಿ ಕುಸಿಯುತ್ತಿದೆ.

ಇಲ್ಲಿನ ಇತಿಹಾಸ ಪ್ರಶಿದ್ಧ ಸ್ಮಾರಕಗಳನ್ನ ನೋಡಲು ಪ್ರತಿನಿತ್ಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸ್ಮಾರಕಗಳನ್ನ ವಿಕ್ಷೇಣೆಗೆಂದು ಬರುವ ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಗಾರ್ಡನ್ ಇಲ್ಲ, ಕುಳಿತುಕೊಂಡು ಊಟ ಮಾಡಲು ಇಲ್ಲಿ ಸೌಲಭ್ಯಗಳಿಲ್ಲ, ಜೊತೆಗೆ ಇಲ್ಲಿನ ಇತಿಹಾಸವನ್ನ ಪರಿಚಯಿಸಲು ಗಾರ್ಡಗಳು ಕೂಡಾ ಇಲ್ಲಿಲ್ಲದಿರುವುದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಇದು ತಿಂದರೆಯಾಗುತ್ತಿದೆ.

ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ 1472ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳಿಂದಾಗಿ ಜಿಲ್ಲೆ ಪ್ರೇಕ್ಷಣೀಯ ಸ್ಥಳವಾಗಿ ಹೊರಹೊಮ್ಮಿದೆ.

Ad
Ad
Nk Channel Final 21 09 2023
Ad