Bengaluru 29°C
Ad

ಡ್ರಗ್ಸ್ ಪ್ರಕರಣ: ನಟಿ ಹೇಮಾ ಕೊಲ್ಲರನ್ನು ಬ್ಯಾನ್ ಮಾಡುವಂತೆ ಒತ್ತಾಯ

ಫಾರ್ಮ್​ಹೌಸ್ ಒಂದರಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಕೊಲ್ಲ ವಿರುದ್ಧ ತೆಲುಗು ಚಿತ್ರರಂಗದಲ್ಲಿ ಅಸಮಾಧಾನ ಕೇಳಿ ಬರುತ್ತಿದೆ.

ಬೆಂಗಳೂರು: ಫಾರ್ಮ್​ಹೌಸ್ ಒಂದರಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಕೊಲ್ಲ ವಿರುದ್ಧ ತೆಲುಗು ಚಿತ್ರರಂಗದಲ್ಲಿ ಅಸಮಾಧಾನ ಕೇಳಿ ಬರುತ್ತಿದೆ.

ನಟಿ ಹೇಮಾ ಅವರನ್ನು ತೆಲುಗು ಚಿತ್ರರಂಗದಿಂದ ನಿಷೇಧ ಮಾಡುವ ಮೂಲಕ ಬೇರೆ ನಟ-ನಟಿಯರಿಗೆ ಪಾಠ ಕಲಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿತ್ರ ರಂಗದ ಹಿರಿಯ ನಟಿಯರು, ಪೋಷಕರ ನಟಿಯರು, ಕೆಲವು ಸಾಮಾಜಿಕ ಹೋರಾಟಗಾರರು ಈಗಾಗಲೇ ಹೇಮಾ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ.

ಇತ್ತೀಚೆಗೆ ಮಾತನಾಡಿದ ನಿರ್ಮಾಪಕ ನಟ್ಟಿ ಕುಮಾರ್, ‘ನಟಿ ಹೇಮಾ ತೆಲುಗು ಚಿತ್ರರಂಗದ ಗೌರವ ಹಾಳು ಮಾಡಿದ್ದಾರೆ. ತೆಲುಗು ನಟ-ನಟಿಯರಿಗೆ ಈ ರೇವ್ ಪಾರ್ಟಿಗಳಿಗೆ ಹೋಗುವ ಅವಶ್ಯಕತೆಯಾದರೂ ಏನಿದೆ? ಈ ರೀತಿಯಾಗಿ ಶಿಸ್ತು ಮೀರಿ ವರ್ತಿಸುವ ನಟ-ನಟಿಯರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು.

ಈಗ ರೇವ್ ಪಾರ್ಟಿಗೆ ಹೋಗಿ ಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಅವರ ವಿರುದ್ಧ ರೌಡಿ ಶೀಟರ್ ತೆರೆಯಬೇಕು, ಚಿತ್ರರಂಗದಿಂದಲೂ ದೂರ ಮಾಡಬೇಕು.ನಟಿ ಹೇಮಾರನ್ನು ಈಗಲೇ ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಿ, ಬೇರೆ ನಟ-ನಟಿಯರಿಗೆ ಶಿಸ್ತಿನ ಪಾಠ ಹೇಳಬೇಕು ಎಂದು ನಟ್ಟಿ ಕುಮಾರ್ ಆಗ್ರಹಿಸಿದ್ದಾರೆ.

Ad
Ad
Nk Channel Final 21 09 2023
Ad