Bengaluru 24°C
Ad

‘ಲವ್ ಜಿಹಾದ್’ ಆರಂಭಗೊಂಡಿರುವುದೇ ಜಾರ್ಖಂಡ್​ನಿಂದ ಎಂದ ಮೋದಿ

ಜಾರ್ಖಂಡ್​ ಮುಕ್ತಿ ಮೋರ್ಚಾದ ವಿರುದ್ಧ ಹಲವಾರು ಆರೋಪಗಳನ್ನು ಮೋದಿ ಮಾಡಿದರು.

ರಾಂಚಿ: ಜಾರ್ಖಂಡ್​ ಮುಕ್ತಿ ಮೋರ್ಚಾದ ವಿರುದ್ಧ ಹಲವಾರು ಆರೋಪಗಳನ್ನು ಮೋದಿ ಮಾಡಿದರು. ಜಾರ್ಖಂಡ್​ನ ದುಮ್ಕಾದಲ್ಲಿ ಮಂಗಳವಾರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ‘ಲವ್ ಜಿಹಾದ್’ ಆರಂಭಗೊಂಡಿರುವುದೇ ಜಾರ್ಖಂಡ್​ನಿಂದ ಎಂದು ಹೇಳಿಕೆ ನೀಡಿದ್ದಾರೆ.

ಜೆಎಂಎಂ ಮತ್ತು ಕಾಂಗ್ರೆಸ್ ಮಿತಿಮೀರಿದ ಲೂಟಿಯಲ್ಲಿ ತೊಡಗಿವೆ ಎಂದು ಆರೋಪಿಸಿದರು, ಜಾರ್ಖಂಡ್ ರಾಜ್ಯದಲ್ಲಿ ಹಣದ ಶಿಖರಗಳು ನಿರ್ಮಾಣಗೊಂಡಿವೆ. ಜೆಎಂಎಂ-ಕಾಂಗ್ರೆಸ್ ವ್ಯಾಪಕ ಲೂಟಿಯಲ್ಲಿ ತೊಡಗಿದೆ ಎಂದು ಹೇಳಿದರು. ಜೂನ್ 4 ರ ನಂತರ ತಮ್ಮ ನೇತೃತ್ವದ ನೂತನ ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ತನ್ನ ಕ್ರಮ ತೀವ್ರಗೊಳಿಸುತ್ತದೆ ಎಂದು ಅವರು ಪ್ರತಿಜ್ಞೆ ಮಾಡಿದರು.

2014ಕ್ಕೂ ಮೊದಲು ಕಾಂಗ್ರೆಸ್ ದಿನದ 24 ಗಂಟೆಯೂ ಲೂಟಿಯಲ್ಲಿ ತೊಡಗಿದ್ದರಿಂದ ಹಗರಣಗಳು ಸಾಮಾನ್ಯವಾಗಿದ್ದವು, ಆದರೆ ತಾವು ಅಧಿಕಾರಕ್ಕೆ ಬಂದ ನಂತರ ಅದನ್ನು ನಿಲ್ಲಿಸಿಸಲಾಯಿತು ಎಂದು ಹೇಳಿದರು.

ಒಳನುಸುಳುವಿಕೆಯಿಂದಾಗಿ ಸಂತಾಲ್ ಪರಗಣಗಳಲ್ಲಿ ಬುಡಕಟ್ಟು ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೋದಿ ಆರೋಪಿಸಿದರು. ಜಾರ್ಖಂಡ್​ನಲ್ಲಿ ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟವು ನುಸುಳುಕೋರರನ್ನು ಪೋಷಿಸುತ್ತಿದೆ ಎಂದು ಅವರು ಆರೋಪಿಸಿದರು.

 

 

Ad
Ad
Nk Channel Final 21 09 2023
Ad