Bengaluru 25°C
Ad

ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ವಾಯುದಾಳಿ: 45 ಮಂದಿ ಸಾವು

ದಕ್ಷಿಣ ನಗರವಾದ ರಫಾದಿಂದ ಸ್ಥಳಾಂತರಗೊಂಡವರ ನಿರಾಶ್ರಿತರ ಶಿಬಿರದ ಡೇರೆಗಳ ಮೇಲೆ ಇಸ್ರೇಲ್‌  ವಾಯುದಾಳಿ ನಡೆಸಿದ ಘಟನೆ ನಡೆದಿದೆ. 

ಟೆಲ್‌ ಅವಿವ್‌: ದಕ್ಷಿಣ ನಗರವಾದ ರಫಾದಿಂದ ಸ್ಥಳಾಂತರಗೊಂಡವರ ನಿರಾಶ್ರಿತರ ಶಿಬಿರದ ಡೇರೆಗಳ ಮೇಲೆ ಇಸ್ರೇಲ್‌  ವಾಯುದಾಳಿ ನಡೆಸಿದ ಘಟನೆ ನಡೆದಿದೆ.

ಈ ದಾಳಿಯಲ್ಲಿ ಕನಿಷ್ಠ 23 ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಕನಿಷ್ಠ 45 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲ್‌ ಸೇನೆಯು ತಿಳಿಸಿದೆ. ಕಳೆದ ರಾತ್ರಿ ಗಾಜಾ ಪಟ್ಟಿಯಲ್ಲಿನ ಪ್ಯಾಲೇಸ್ಟಿನಿಯನ್ ನಾಗರಿಕರ ಮೇಲಿನ ಭೀಕರ ದಾಳಿ ಪರಿಣಾಮವನ್ನು ಪರಿಶೀಲಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ.

ಸಚಿವಾಲಯವು ಇಸ್ರೇಲ್‌ನ ಮಿಲಿಟರಿ ದಾಳಿಯಿಂದ ಸತ್ತವರ ಸಂಖ್ಯೆ 36,050 ಕ್ಕೆ ಏರಿಕೆಯಾಗಿದ್ದು, 81,026 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

Ad
Ad
Nk Channel Final 21 09 2023
Ad