News Karnataka Kannada
Wednesday, April 17 2024
Cricket
ಬೆಂಗಳೂರು ನಗರ

ಅಗ್ರಹಾರ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

Bear spotted in Agrahara village, villagers worried
Photo Credit : News Kannada

ತುಮಕೂರು: ಕೊರಟಗೆರೆ ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಬೆಳ್ಳಂ ಬೆಳ್ಳಗೆ ಕರಡಿಯೊಂದು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಇನ್ನಷ್ಟು ಹೆಚ್ಚಿನ ಆತಂಕವನ್ನು ಸೃಷ್ಠಿಸಿದೆ.

ಬುಧವಾರ ಬೆಳಿಗ್ಗೆ ಗ್ರಾಮದ ರೈತ ಮತ್ತು ಹಸುವಿನ ದಾಳೆ ನಡೆಸಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳನ್ನು ಮಾಡಿ ಭಯಪಟ್ಟು ಪಾಳು ಬಿದ್ದ ಮನೆಯೊಂದರ ಪೊದೆಯಲ್ಲಿ ಸೇರಿಕೊಂಡಿರುವ ಘಟನೆ ನೀಡಿದೆ.

ಗ್ರಾಮಸ್ಥರು ಗಾಯಗೊಂಡ ರೈತನನ್ನು ಕೊರಟಗೆರೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ವೇಳೆ ಗ್ರಾಮಸ್ಥರ ಕರೆಯ ನಂತರ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮತ್ತು ಅರಣ್ಯ ಇಲಾಖೆಯ ಆರ್‌ಎಫ್‌ಓ ಸುರೇಶ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉತ್ತಮ ಚಿಕಿತ್ಸೆ ಕೊಡುವಂತೆ ವೈದ್ಯರಿಗೆ ತಿಳಿಸಿ ಘಟನೆಯಾದ ಸ್ಥಳಕ್ಕೆ ಆಗಮಿಸಿ ಸಂಜೆ ಮತ್ತು ಮುಂಜಾನೆ ಒಂಟಿಯಾಗಿ ತೋಟ, ಹೊಲ, ಗದ್ದೆಗಳಿಗೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಯು ಪಾಳು ಬಿದ್ದ ಮನೆಯ ಸುತ್ತಲೂ ಬಲೆ ಹಾಕಿ, ಬೋನನ್ನು ಹಿಡಲಾಗಿದ್ದು ಸ್ಥಳೀಯ ಜನರಿಗೆ ಮೈಕ್ ಮೂಲಕ ಜಾಗೃತಿ ಮೂಡಿಸಿ ಅಪರೇಷನ್ ಕರಡಿ ಕಾರ್ಯಾಚರಣೆ ಶುರು ಮಾಡಿ ಹಿಡಿಯುವಂತಹ ಕೆಲಸ ಮಾಡುತ್ತೇವೆ ಎಂದು ಅರಣ್ಯ ಇಲಾಖೆಯ ಆರ್‌ಎಫ್‌ಓ ಸುರೇಶ್ ತಿಳಿಸಿದರು.

ಗಾಬರಿಗೊಂಡಿದ್ದ ಗ್ರಾಮಸ್ಥರಿಗೆ ಯಾವುದೇ ಆತಂಕ ಪಡದಂತೆ ಕಾಡು ಪ್ರಾಣಿಗಳು ಕಂಡಾಗ ಅವುಗಳಿಂದ ದೂರ ಸರಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಿದರೆ ತಕ್ಷಣ ಅವರು ತಮ್ಮ ಕರೆಗೆ ಸ್ಪಂದಿಸಿ ಆ ಕ್ಷಣ ಅವರು ಏನು ಮಾಡಬೇಕೆಂದು ತಿಳಿಸುತ್ತಾರೆ.

ಹಾಗೆಯೇ ಮನೆಯ ಸುತ್ತಮುತ್ತ ಸ್ವಚ್ಚತೆಗೆ ಆಧ್ಯತೆ ಕೊಟ್ಟಾಗ ಕಾಡುಪ್ರಾಣಿಗಳು ಗ್ರಾಮಗಳ ಪಡುವುದನ್ನೂ ತಪ್ಪಿಸಲು ಸಾಧ್ಯವಾಗುವುದು ಎಂದು ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು