News Karnataka Kannada
Thursday, April 25 2024
Cricket
ಬೆಂಗಳೂರು

ಕೊಹ್ಲಿ ಅಭಿಮಾನಿಗೆ ಥಳಿಸಿದ ಪ್ರಕರಣ : ಮಾನವ ಹಕ್ಕು ಆಯೋಗಕ್ಕೆ ದೂರು

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೈದಾನ ಪ್ರವೇಶಿಸಿದ್ದ ಯುವಕನಿಗೆ ಥಳಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡಮಾಲಿ ಪಾಟೀಲ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಘಟನೆ ನಡೆದಿದೆ.
Photo Credit : NewsKarnataka

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೈದಾನಕ್ಕೆ ಪ್ರವೇಶಿಸಿದ್ದ ಯುವಕನಿಗೆ ಥಳಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡಮಾಲಿ ಪಾಟೀಲ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಘಟನೆ ನಡೆದಿದೆ.

ಮಾನವೀಯತೆ ಮರೆತು ಲಕ್ಷಾಂತರ ಜನರ ಮುಂದೆ ಯುವಕನಿಗೆ ಥಳಿಸಿದ್ದಾರೆ‌‌. ಹಲ್ಲೆ ಮಾಡಲು ಹಕ್ಕು ಇವರಿಗಿಲ್ಲ. ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಮಾರ್ಚ್‌ 25 ರಂದು ಪಂಜಾಬ್ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಧ್ಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿತ್ತು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಬರುತ್ತಿದ್ದಂತೆ ಅಭಿಮಾನಿಯೊಬ್ಬ ಹೈ ಸೆಕ್ಯೂರಿಟಿ ಮಧ್ಯೆಯೂ ಕ್ರೀಸ್ ಒಳಗಡೆ ನುಗ್ಗಿ ಕೊಹ್ಲಿ ಕಾಲು ಹಿಡಿದು ಹುಚ್ಚಾಟ ನಡೆಸಿದ್ದ. ಕೊಹ್ಲಿ ಬರುವುದನ್ನೇ ಕಾಯುತ್ತಿದ್ದ ಅಭಿಮಾನಿ ಎಲ್ಲಾ ರೂಲ್ಸ್‌ಗಳನ್ನು ಮುರಿದು ಕ್ರೀಸ್ ಒಳಗಡೆ ನುಗ್ಗಿ ಏಕಾಏಕಿ ಕೊಹ್ಲಿ ಕಾಲಿಗೆ ಬಿದ್ದು ಬಳಿಕ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದನು. ಕೂಡಲೇ ಒಳನುಗ್ಗಿದ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ನಂತರ ಮೈದಾನ ದಿಂದ ಹೊರಗೆ ಕರೆತಂದು ಸಿಬ್ಬಂದಿ ಥಳಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಅಭಿಮಾನಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮೈದಾನದೊಳಗೆ ನುಗ್ಗಿದವ 17 ವರ್ಷದ ಯುವಕನಾಗಿದ್ದು ಆರ್​​ಸಿಬಿ ಪಂದ್ಯ ನೋಡಲು ರಾಯಚೂರಿನಿಂದ ರೈಲಿನಲ್ಲಿ ಆಗಮಿಸಿದ್ದ ಎಂದು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಹುಚ್ಚು ಅಭಿಮಾನಿಯಾಗಿರುವ ಈತ ಈ ಪಂದ್ಯ ನೋಡಲು 3 ಸಾವಿರ ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿಸಿದ್ದನು ಎಂಬ ಮಾಹಿತಿ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು