News Karnataka Kannada
Friday, April 19 2024
Cricket
ಅಂಕಣ

ಪುದೀನಾ ಎಲೆಯಲ್ಲಿದೆ ಸೌಂದರ್ಯ ವರ್ಧಕ ಗುಣ

The beauty properties of mint leaves
Photo Credit : News Kannada

ಸೌಂದರ್ಯದ ಬಗ್ಗೆ ಯುವತಿಯರಿಗೆ ಅತೀವ ಕಾಳಜಿ ಇರುತ್ತದೆ. ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಪ್ರೋಡೆಕ್ಟ್ ಗಳನ್ನು ಯುವತಿಯರು ಬಳಸುತ್ತಾರೆ. ಹೀಗೆ ಮಾಡೋ ಬದಲು ಮನೆಯಲ್ಲೇ ಫೇಸ್ ಪ್ಯಾಕ್ ಗಳನ್ನು, ಫೇಸ್ ಮಾಸ್ಕ್ ಗಳನ್ನು ತಯಾರಿ ಮಾಡಿಕೊಂಡು ಬಳಕೆ ಮಾಡುವುದು ಒಳಿತು. ಜೊತೆಗೆ ಇದು ಸೇಫ್ ಎಂದೂ ಹೇಳಬಹುದು. ಪಪ್ಪಾಯಿ ಹಣ್ಣು, ಜೇನುತುಪ್ಪ, ಅಲೋವೆರಾ, ಅರಿಶಿಣ ಹೀಗೆ ಕೆಲವೊಂದು ಮನೆಯಲ್ಲಿಯೇ ಸಿಗುವಂತಹದರಲ್ಲಿ ಫೇಸ್ ಪ್ಯಾಕ್ ಗಳನ್ನು ಮನೆಯಲ್ಲೇ ಮಾಡಿ ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳ ಬಹುದು ಜೊತೆಗೆ ಮುಖದ ಮೇಲಿನ ಕೆಲವೊಂದು ಸಮಸ್ಯೆಗಳು ಅಂದರೆ ಮೊಡವೆ ಸಮಸ್ಯೆ, ಕಲೆಯಿಂದ ಮುಕ್ತಿ ಪಡೆಯಲು ಇದು ಸಹಾಯ ಮಾಡುತ್ತದೆ. ಇಂದು ನಾವು ಅಡುಗೆ ಕೋಣೆಯಲ್ಲಿ ಇರುವಂತಹ ಪುದೀನಾ ಎಲೆ ಬಳಸಿಕೊಂಡು ಹೇಗೆ ಮುಖದ ಸಮಸ್ಯೆಗಳಿಂದ ದೂರ ಆಗ ಬಹುದು ಮತ್ತು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.

ಪುದೀನಾ ಎಲೆಯ ಫೇಸ್ ಪ್ಯಾಕ್ ತಯಾರಿಸಲು ಮೊದಲಿಗೆ ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದು ಗ್ರೈನ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಒಣಗಲು ಬಿಟ್ಟು ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆಯ ಬೇಕು ಹೀಗೆ ಮಾಡುವುದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ.

ಪುದೀನಾ ಎಲೆ, ಜೇನು ತುಪ್ಪ ಮತ್ತು ರೋಸ್ ವಾಟರ್ ಇವು ಮೂರನ್ನೂ ಮಿಶ್ರಣ ಮಾಡಿ ಫೇಸ್ ಪ್ಯಾಕ್ ತಯಾರಿಸಿಕೊಂಡು ಮುಖದ ಮೇಲೆ ಹಚ್ಚಿ. ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆದು ಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಮೊಡವೆ ಸಮಸ್ಯೆಯಿಂದ ಪಾರಾಗಲು, ಪುದೀನಾ ಎಲೆಯ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ರೋಸ್ ವಾಟರ್ ಹಾಕಿ ಮುಖಕ್ಕೆ ಹಚ್ಚಿ. ಹೀಗೆ ಕ್ರಮೇಣ ಮಾಡಿದರೆ ಮೊಡವೆ ಸಮಸ್ಯೆಯೂ ದೂರ ಆಗುತ್ತದೆ ಜೊತೆಗೆ ಕಲೆಗಳು ಮಾಯವಾಗುತ್ತವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು