News Karnataka Kannada
Thursday, April 18 2024
Cricket
ಬಾಲಿವುಡ್

‘ಹೌಸ್​ಫುಲ್ 5’ ರಿಲೀಸ್ ದಿನಾಂಕ ಘೋಷಿಸಿದ ನಟ ಅಕ್ಷಯ್ ಕುಮಾರ್

Housefull 5 Announced
Photo Credit : Twitter

ಅಕ್ಷಯ್ ಕುಮಾರ್ ಅವರು ತಾವು ನಟಿಸುತ್ತಿರುವ ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ಗಂಭೀರ ವಿಚಾರಗಳು, ಸಮಾಜಕ್ಕೆ ಮೆಸೇಜ್ ನೀಡುವಂಥ ವಿಚಾರಗಳ ಮೇಲೆ ಅವರು ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಈಗ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಾರಿ ಅವರು ಅನೌನ್ಸ್ ಮಾಡಿದ್ದು ಹಾಸ್ಯಪ್ರಧಾನ ಸಿನಿಮಾ ಅನ್ನೋದು ವಿಶೇಷ.

ಹೌದು, ‘ಹೌಸ್​ಫುಲ್ 5’ ಮೂಲಕ ಅಕ್ಷಯ್ ಕುಮಾರ್ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ‘ಹೌಸ್​ಫುಲ್’ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ. ಈ ಸರಣಿಯಿಂದ ಈಗಾಗಲೇ ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ.

ಸಾಜಿದ್ ನಾಡಿಯಾದ್ವಾಲಾ ಅವರು ‘ಹೌಸ್​ಫುಲ್ 5’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತರುಣ್​ಮನ್ಸುಖಾನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅಕ್ಷಯ್ ಕುಮಾರ್ ಮಾಡಿರುವ ಟ್ವೀಟ್​ನಲ್ಲಿ ರಿತೇಷ್ ದೇಶ್​ಮುಖ್​ ಅವರನ್ನು ಟ್ಯಾಗ್ ಮಾಡಲಾಗಿದೆ. ಹೀಗಾಗಿ, ಅವರು ಈ ಸಿನಿಮಾದಲ್ಲಿ ನಟಿಸೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ‘ಹೌಸ್​​ಫುಲ್ 5’ ಚಿತ್ರ  2024ರ ದೀಪಾವಳಿಯಂದು ರಿಲೀಸ್ ಆಗಲಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಅಕ್ಷಯ್ ಕುಮಾರ್ ಮಾಡಿರುವ ಟ್ವೀಟ್​ನಲ್ಲಿ ರಿತೇಷ್ ದೇಶ್​ಮುಖ್​ ಅವರನ್ನು ಟ್ಯಾಗ್ ಮಾಡಲಾಗಿದೆ. ಹೀಗಾಗಿ, ಅವರು ಈ ಸಿನಿಮಾದಲ್ಲಿ ನಟಿಸೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು