News Karnataka Kannada
Monday, April 22 2024
Cricket
ಮಂಗಳೂರು

ಮಹಾ ಮಳೆಗೆ ಮಂಗಳೂರು ಜಲಾವೃತ: ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿದ ನೀರು

Mangaluru flooded
Photo Credit : News Kannada

ಮಂಗಳೂರು: ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಮಂಗಳೂರು ನಗರದಲ್ಲಿ ಮಳೆ ಸುರಿಯುತ್ತಿದ್ದು, ಮಳೆಗೆ ಮಂಗಳೂರಿನ ಪಂಪ್ವೆಲ್ ವೃತ್ತದಲ್ಲಿ ನೀರು ತುಂಬಿದೆ. ಪಂಪ್‌ವೆಲ್‌ ಫ್ಲೈಓವರ್ ಅಡಿಭಾಗ ಸಂಪೂರ್ಣ ಜಲಾವೃತವಾಗಿದೆ. ಮೇಲ್ಸೇತುವೆ ಅಡಿಭಾಗದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ನೀರು ತುಂಬಿರುವುದರಿಂದ ವಾಹನಗಳು ಸಾಗಲು ಸಾಧ್ಯವಾಗದೇ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಭಾರೀ ಮಳೆಗೆ ಪಂಪ್ ವೆಲ್, ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಗಲೀಜು ನೀರು ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

 

ಇಂಡಿಯನ್ ಬ್ಯಾಂಕ್‌ನೊಳಗೆ ನೀರು ನುಗ್ಗಿ ಬ್ಯಾಂಕ್ ಸಿಬ್ಬಂದಿಗಳು ಕಡತ, ಪಕ್ಕದಲ್ಲಿದ್ದ ಎಟಿಎಂ ಮಷಿನ್‌ನಲ್ಲಿದ್ದ ಹಣವನ್ನು ಸ್ಥಳಾಂತರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮ್ಯಾನ್ ಹೋಲ್ ದುರಸ್ತಿಯಾಗುತ್ತಿದ್ದು ಇನ್ನು ಕೂಡ ಪೂರ್ಣವಾಗಿಲ್ಲ ಇದರಿಂದ ಮಳೆನೀರಿನೊಂದಿಗೆ ಗಲೀಜು ನೀರು ಹೋಟೆಲ್‌, ಬ್ಯಾಂಕ್‌ ಮಡಿಕಲ್‌ ಗೆ ನುಗ್ಗಿದೆ.

ಹೆದ್ದಾರಿಗಳು ಬ್ಲಾಕ್‌: ನಂತೂರು, ಪಡೀಲ್‌ ಪಂಪ್‌ ವೆಲ್‌ ಗಳಲ್ಲಿ ಹೆದ್ದಾರಿ ಬ್ಲಾಕ್‌ ಆಗಿದೆ. ಪಂಪ್‌ವೆಲ್‌ನಲ್ಲಿ ತೋಡು ತುಂಬಿ ಹರಿದು ಅಂಗಡಿ ಮುಂಗಟ್ಟು ಗಳಿಗೆ ನೀರು ನುಗ್ಗಿದೆ. ಅದೇ ರೀತಿ ಮಳೆಯಿಂದಾಗಿ ಪಂಪ್‌ ವೆಲ್‌ ನಿಂದ ಮಹಾಲಿಂಗೇಶ್ವರ ದೇವಳಕ್ಕೆ ಹೋಗುವ ದಾರಿಯಲ್ಲಿ ರಸ್ತೆ ಗೋಚರವಾಗದೆ ಕಾರೊಂದು ಚರಂಡಿಗೆ ಉರುಳಿದೆ. ನಂತೂರು ಸರ್ಕಲ್‌ ಎದುರು ರಸ್ತೆಗೆ ಮರ ಉರುಳಿಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು