Bengaluru 22°C
Ad

ಪ್ರಯಾಣದ ವೇಳೆ ಹೆರಿಗೆ ನೋವು : ಬಸ್ಸನ್ನೇ ಆಸ್ಪತ್ರೆಯತ್ತ ಒಯ್ದ ಚಾಲಕ

ತುಂಬು ಗರ್ಭಿಣಿಯೊಬ್ಬರು ತ್ರಿಶೂರ್​ನಿಂದ ಕೋಳಿಕ್ಕೋಡ್​ಗೆ ಬಸ್​ನಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ ಈ ವೇಳೆ ಬಸ್‌ ಚಾಲಕ ಬಸ್ಸನ್ನೇ ಆಸ್ಪತ್ರೆಯತ್ತ ತಂದು ನಿಲ್ಲಿಸಿ ಮಾನವೀಯತೆ ಮೆರೆದಿದ್ದಾನೆ. ಆ ಮುನ್ನವೇ ಮಹಿಳೆ ಬಸ್​ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಬಸ್​ ಪೆರಮಂಗಲಂ ಪ್ರದೇಶವನ್ನು ದಾಟಿದಂತೆ 37 ವರ್ಷದ ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ತಿಳಿದಂತೆ ಬಸ್​ ಚಾಲಕ ಬಸ್​ ಅನ್ನು ತ್ರಿಶೂರು ಕಡೆಗೆ ತಿರುಗಿಸಿದ್ದಾರೆ. ಅಲ್ಲಿನ ಅಮಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಬಸ್​ ಆಸ್ಪತ್ರೆಯನ್ನು ತಲುಪುವ ಮೊದಲೇ ಸಿಬ್ಬಂದಿಗಳು ಮತ್ತು ವೈದ್ಯರು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ ಬಸ್​ ಆಸ್ಪತ್ರೆ ಬಳಿ ಬಂದಂತೆ ಮಹಿಳೆ ವೈದ್ಯರ ಸಹಾಯದಲ್ಲಿ ಬಸ್​ನಲ್ಲೇ ಹೆರಿಗೆಯಾಗಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಅವರ ನವಜಾತ ಶಿಶುವನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

https://x.com/SafetyOverSpeed/status/1795844128309497932

Ad
Ad
Nk Channel Final 21 09 2023
Ad