Bengaluru 22°C
Ad

ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಬಂಧಿಸಲು ಎಸ್​ಐಟಿ ಸಜ್ಜಾಗಿದೆ; ಗೃಹ ಸಚಿವ ಜಿ ಪರಮೇಶ್ವರ್

G Parmeshwr

ಬೆಂಗಳೂರು: “ನಾಳೆ ಶುಕ್ರವಾರ ಸಂಸದ ಪ್ರಜ್ವಲ್ ರೇವಣ್ಣ ಬರುತ್ತಾರೆ ಎನ್ನುವ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಎಸ್​ಐಟಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ವಿಮಾನ ನಿಲ್ದಾಣದಲ್ಲಿಯೇ ಅವರನ್ನು ವಶಕ್ಕೆ ಪಡೆಯಲಾಗುವುದು” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ದೇಶಕ್ಕೆ ಹೋಗಿ ಸುಲಭವಾಗಿ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಆ ರೀತಿ ಮಾಡಲು ಬರುವುದಿಲ್ಲ. ಹೊರ ದೇಶದಲ್ಲಿ ಬಂಧನ ಎಂಬುದು ನೆಲಮಂಗಲಕ್ಕೆ ಹೋಗಿ ಬಂಧನ ಮಾಡಿದಷ್ಟು ಸುಲಭವಲ್ಲ. ಕೇಂದ್ರ ಕೂಡ ಬೇರೆ ದೇಶದಲ್ಲಿ ಬಂಧಿಸುವ ಅಧಿಕಾರ ಹೊಂದಿಲ್ಲ. ಇದೇ ಕಾರಣಕ್ಕೆ ಇಂಟರ್​ಪೋಲ್​ ಇದೆ. ಅವರು ಬರುವುದಾಗಿ ಈಗಾಗಲೇ ವಿಡಿಯೋದಲ್ಲಿ ತಿಳಿಸಿದ್ದಾರೆ. ಅವರು ಬಂದರೆ ಎಲ್ಲಾ ಕಾನೂನು ಪ್ರಕ್ರಿಯೆ ಆರಂಭ ಆಗಲಿದೆ ಎಂದರು.

ಈಗಾಗಲೇ ಪ್ರಜ್ವಲ್​ ಬಂಧನಕ್ಕೆ ವಾರೆಂಟ್​ ಜಾರಿಯಾಗಿದೆ. ಈ ಹಿನ್ನೆಲೆ ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧನವಾಗಬೇಕು. ಅವರ ಪಾಸ್​ ಪೋರ್ಟ್​ ರದ್ದತಿಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು, ಕೇಂದ್ರ ಕಾನೂನು ಪ್ರಕ್ರಿಯೆ ಅನುಸಾರ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಕೇಂದ್ರ ಕೂಡ ಈಗಾಗಲೇ ತಿಳಿಸಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

Ad
Ad
Nk Channel Final 21 09 2023
Ad