Bengaluru 29°C
Ad

ಶಿರಾಡಿಯ ಎಂಜಿರದಲ್ಲಿ ನಿರ್ಮಾಣ ಹಂತದ ಕಿರು ಸೇತುವೆ ಕುಸಿತ

Shirady

ಪುತ್ತೂರು: ನಿರ್ಮಾಣ ಹಂತದ ಕಿರುಸೇತುವೆಯೊಂದು ಕುಸಿದು ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ದಕ್ಷಿಣ ಕನ್ನಡ ಜಿಲ್ಲೆಯ ‌ಶಿರಾಡಿ  ಸಮೀಪದ‌ ಎಂಜಿರ ಎಂಬಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ‌ ಹಿನ್ನಲೆಯಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದ್ದು, ಈ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನೀರು ಹರಿದು ಕುಸಿದು ಬಿದ್ದಿರುವ ಸಾಧ್ಯತೆ ಎಂದು ಹೇಳಲಾಗಿದೆ.

ಆದರೆ ಸಾರ್ವಜನಿಕರು ಈ ಕಾಮಗಾರಿ ಕಳಪೆಯಾಗಿತ್ತು ಎಂದು ಆರೋಪಿಸಿದ್ದು, ಈ ಕಾರಣದಿಂದಾಗಿಯೇ ಸೇತುವೆ ಕುಸಿದಿದೆ ಎಂದು ಆರೋಪಿಸಿದ್ದಾರೆ.

Ad
Ad
Nk Channel Final 21 09 2023
Ad