Bengaluru 27°C
Ad

ಅಕ್ರಮ ಗೋ ಸಾಗಾಟ: ವಾಹನವನ್ನು ಬೆನ್ನಟ್ಟಿ ಹಿಡಿದ ಬಜರಂಗದಳ ಕಾರ್ಯಕರ್ತರು

ಕಸಾಯಿ ಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿ ಹಿಡಿದಿರುವ ಘಟನೆ ಯಾದಗಿರಿ ಜಿಲ್ಲೆಯ ವರ್ಕನಳ್ಳಿ ಬಳಿ ನಡೆದಿದೆ.

ಯಾದಗಿರಿ: ಕಸಾಯಿ ಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿ ಹಿಡಿದಿರುವ ಘಟನೆ ಯಾದಗಿರಿ ಜಿಲ್ಲೆಯ ವರ್ಕನಳ್ಳಿ ಬಳಿ ನಡೆದಿದೆ.

Ad

ಆ ವಾಹನದಲ್ಲಿ ನಿರ್ದಯವಾಗಿ ಹಾಕಲಾಗಿದ್ದ 7 ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವವರರ ಬಗ್ಗೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಲಾಗಿದ್ದು ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.

Ad

ಮಸ್ಕನಳ್ಳಿ ಗ್ರಾಮದಿಂದ ಕಲಬುರಗಿಗೆ ವಾಹನದಲ್ಲಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಯಾವುದೇ ಅನುಮತಿಯಿಲ್ಲದೇ ಹಾಗೂ ನಿರ್ದಾಕ್ಷಿಣ್ಯ ರೀತಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮಾಹಿತಿಯನ್ನು ಸ್ಥಳೀಯರು ಬಜರಂಗದಳ ಕಾರ್ಯಕರ್ತರಿಗೆ ನೀಡಿದ್ದರು. ತಕ್ಷಣ ಗೋ ಸಾಗಾಟದ ವಾಹನವನ್ನು ಬೆನ್ನಟ್ಟಿ ತಡೆದು ಬಜರಂಗದಳ ಕಾರ್ಯಕರ್ತರು ಅವುಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ನೀಡಿದ್ದಾರೆ.

Ad

ಸಾಧಾರಣಾ ಟಾಟಾ ಸುಮೋ ವಾಹನದಲ್ಲಿ 7 ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕಾರಣ ಅವರುಗಳೆಲ್ಲೂ ಗಂಭೀರ ಸ್ಥಿತಿಯಲ್ಲಿದ್ದವು. ಗೋವುಗಳನ್ನು ರಕ್ಷಿಸಿ ವಾಹನ ಸಹಿತ ಪೋಲಿಸ್ ಠಾಣೆಗೆ ಒಪ್ಪಿಸಲಾಗಿದೆ.

Ad

ನಿರುಪದ್ರವಿ ಗೋವುಗಳನ್ನು ತೆಗೆದುಕೊಂಡು ಹೋಗಿ ಮಾಂಸಕ್ಕಾಗಿ ಕಡಿಯಲಾಗಿತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಗೋವಿನ ರಕ್ಷಣೆ ಮಾಡಬೇಕೆಂದು ಬಜರಂಗದಳ ಮುಖಂಡ ಶಿವಕುಮಾರ ಆಗ್ರಹಿಸಿದ್ದಾರೆ.

Ad
Ad
Ad
Nk Channel Final 21 09 2023