Bengaluru 28°C
Ad

ಶಾಸಕರ ಭವನದಲ್ಲಿ ಇಂದಿನಿಂದ ʼನಮ್ಮೂರ ಬಿರಿಯಾನಿ ಹೋಟಲ್ʼ ಆರಂಭ

Bhavan

ಬೆಂಗಳೂರು: ರಾಜ್ಯವನ್ನು ಪ್ರತಿನಿಧಿಸುವ ಶಾಸಕರು,ಮಾಜಿ ಶಾಸಕರಿಗೆ,ಸುತ್ತಮುತ್ತಲಿನ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ,ಸಿಬ್ಬಂದಿಗೆ, ಪತ್ರಕರ್ತರು ಮತ್ತು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವ ಸಲುವಾಗಿ ಶಾಸಕರ ಭವನದಲ್ಲಿ ನಮ್ಮೂರ ಬಿರಿಯಾನಿ ಹೋಟೆಲ್ ಆರಂಭಿಸಲಾಗಿದೆ.

ದಿನ ನಿತ್ಯ ನೂರಾರು ಜನರು ಭೇಟಿ ನೀಡುವ ಶಾಸಕರ ಭವನದಲ್ಲಿ ರಾಸಾಯನಿಕ ರಹಿತವಾದ ಮಸಾಲೆಗಳನ್ನು ಉಪಯೋಗಿಸಿ ಸಿದ್ಧಪಡಿಸಿದ ಗುಣಮಟ್ಟದ ಮಾಂಸಹಾರಿ ಊಟ,ತಿಂಡಿಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಶಾಸಕರ ಭವನದ ಕಟ್ಟಡ-೨ರ ನೆಲಮಾಳಿಗೆಯಲ್ಲಿ ನೂತನ ಹೋಟೆಲ್‌ನ್ನು ಇಂದು    ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿದರು.

ನಮ್ಮೂರ ಬಿರಿಯಾನಿ ಹೋಟಲ್ ಮಾಲೀಕ ಮಂಜುನಾಥ ಮಾತನಾಡಿ, ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ ಸಂಸ್ಥೆಯು ೨೦೨೦ರಲ್ಲಿ ಸ್ಥಾಪನೆಗೊಂಡಿದ್ದು, ಗುಣಮಟ್ಟದ ಮತ್ತು ರುಚಿ ಶುಚಿ ಮಾಂಸಹಾರಿ ಆಹಾರ ಪದಾರ್ಥಗಳನ್ನು ಬೆಂಗಳೂರಿನ ಜನರಿಗೆ ಉಣಬಡಿಸುತ್ತಾ ಬಂದಿದೆ.
ಹೋಟೆಲ್‌ನಲ್ಲಿ ದೊರೆಯುವ ಆಹಾರ ಪದಾರ್ಥಗಳಿಗೆ ಸಿಲಿಕಾನ್ ಸಿಟಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಸಕರ ಭವನದಲ್ಲಿ ಮೊದಲ ಬಾರಿಗೆ ನೂತನ ಮಳಿಗೆ ಪ್ರಾರಂಭಿಸಿದ್ದೇವೆ. ಇದರಿಂದ ಮತ್ತಷ್ಟು ಜವಾಬ್ದಾರಿ ನಮ್ಮದಾಗಿದೆ ಎಂದರು.

Ad
Ad
Nk Channel Final 21 09 2023
Ad