News Karnataka Kannada
Monday, April 22 2024
Cricket
ದೆಹಲಿ

ಫೋರ್ಬ್ಸ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್

New Project (22)
Photo Credit : News Kannada

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭಾರತದ ಅತ್ಯಂತ ಪ್ರಬಲ ಮಹಿಳೆ ಎಂದು ಫೋರ್ಬ್ಸ್ ಪಟ್ಟಿಯಲ್ಲಿ ಗುರುತಿಸಲಾಗಿದೆ. ಫೋರ್ಬ್ಸ್ ಮೋಸ್ಟ್ ಪವರ್​ಫುಲ್ ವುಮೆನ್ 2023 ಪಟ್ಟಿಯಲ್ಲಿ 100 ಮಂದಿ ಅತಿ ಪ್ರಬಲ ಮಹಿಳೆಯರನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ನಾಲ್ವರು ಭಾರತೀಯ ಮಹಿಳೆಯರಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ ಎನಿಸಿದ್ದಾರೆ.

ಈ ಪಟ್ಟಿಯಲ್ಲಿ ಅವರು 32ನೇ ಸ್ಥಾನ ಪಡೆದಿದ್ದಾರೆ. ಎಚ್​ಸಿಎಲ್ ಕಾರ್ಪೊರೇಷನ್​ನ ಸಿಇಒ ರೋಷನಿ ನಾದರ್ ಮಲ್ಹೋತ್ರಾ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ಸೋಮಾ ಮೊಂಡಲ್ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರು ಈ ಪಟ್ಟಿಯಲ್ಲಿ ಇರುವ ಇತರ ಭಾರತೀಯ ಮಹಿಳೆ ಎನಿಸಿದ್ದಾರೆ. ಯೂರೋಪಿಯನ್ ಕಮಿಷನ್​ನ ಅಧ್ಯಕ್ಷೆಯಾಗಿರುವ ಜರ್ಮನ್ ಮೂಲದ ಉರ್ಸುಲಾ ವೋನ್ ಡೆರ್ ಲೆಯೆನ್ ಅವರು 2023ರ ವರ್ಷದಲ್ಲಿ ವಿಶ್ವದ ಅತ್ಯಂತ ಪ್ರಬಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು