Bengaluru 22°C
Ad

ಹೀರಾಮಂಡಿಗೆ ಸೀಕ್ವೆಲ್ ಘೋಷಿಸಿದ ನೆಟ್​ಫ್ಲಿಕ್ಸ್; ಫ್ಯಾನ್ಸ್ ಥ್ರಿಲ್

Heeramnd

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ಸೀರಿಸ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಈ ಸೀರಿಸ್ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿದೆ. ಈಗ ನೆಟ್​ಫ್ಲಿಕ್ಸ್ ಕಡೆಯಿಂದ ಘೋಷಣೆ ಒಂದು ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸೀರಿಸ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ.

‘ಹೀರಾಮಂಡಿ’ ಒಂದು ಮ್ಯೂಸಿಕ್ ಸೀರಿಸ್​ ರೀತಿಯಲ್ಲಿ ಮೂಡಿ ಬಂದಿದೆ. ಈ ಸರಣಿಯ ಹಾಡನ್ನು ಅನೇಕರು ಇಷ್ಟಪಟ್ಟಿದ್ದಾರೆ. ಕಲಾವಿದರ ನಟನೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಹೀರಾಮಂಡಿಯ ವೇಶ್ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿ ಆಗುತ್ತಾರೆ. ಎರಡನೇ ಭಾಗದಲ್ಲಿ ದ್ವಿಭಜನೆಯ ನಂತರ ಹೀರಾಮಂಡಿ ಮೇಲೆ ಆದ ಪರಿಣಾಮಗಳನ್ನು ವಿವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇನ್ನು ಈ ಸರಣಿ ಕುರಿತು ಇಂದು (ಜೂನ್ 3) ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಮುಂಬೈನಲ್ಲಿ 100ಕ್ಕೂ ಅಧಿಕ ಡ್ಯಾನ್ಸರ್​ಗಳು ನೃತ್ಯ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ‘ಹೀರಾಮಂಡಿ ಎರಡನೇ ಸೀಸನ್ ಬರಲಿದೆ’ ಎಂದು ಬರೆಯಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Ad
Ad
Nk Channel Final 21 09 2023
Ad