News Karnataka Kannada
Sunday, April 21 2024
Cricket
ಬೆಂಗಳೂರು ನಗರ

ಪಿಎಸ್ಐ ಬೆನ್ನಲ್ಲೇ ಪೊಲೀಸ್ ಇಲಾಖೆಯ ಮತ್ತೊಂದು ಸ್ಕ್ಯಾಮ್ ಬೆಳಕಿಗೆ

After PSI, another scam of police department has come to light.
Photo Credit : News Kannada

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಪ್ರಕರಣ ಬಯಲಾಗಿದೆ. ರವಿವಾರ ಜಿಲ್ಲಾ ಸಶಸ್ತ್ರ ಮೀಸಲುಪಡೆ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇಲಾಖೆಯಲ್ಲಿ ಖಾಲಿ ಇರುವ ಜಿಲ್ಲಾ ಸಶಸ್ತ್ರ ಮೀಸಲುಪಡೆ 400 ಹುದ್ದೆಗಳಿಗೆ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಷ್ಟೇ ಕರೆದಿದ್ದ ನೋಟಿಫಿಕೇಷನ್ ಕರೆಯಲಾಗಿತ್ತು. ಇಂದು ರಾಜ್ಯದ ಎಲ್ಲ ಕಡೆ ಸಶಸ್ತ್ರ ಮೀಸಲುಪಡೆಯ ಹುದ್ದೆಗೆ ಪರೀಕ್ಷೆ ನಡೆಯುತ್ತಿದೆ.

ಆದರೆ ಕೆಲ ಏಜೆಂಟ್ ಗಳು ತಮ್ಮ ಅಭ್ಯರ್ಥಿಗಳನ್ನು ಕಳೆದ ದಿನ ಒಂದೆಡೆ ಸೇರಲು ಹೇಳಿದ್ದಾರೆ. ಈ ಮೂಲಕ ಪ್ರಶ್ನೆ ಹಾಗು ಉತ್ತರ ಪತ್ರಿಕೆ ಹಂಚಲು ಮುಂದಾಗಿದ್ದರು. ಆದರೆ ಇವರು ಸಿಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಇದೇ ಆರೋಪಿಗಳು ಈ ಹಿಂದೆ ಅಂದರೆ, 2018ರಲ್ಲಿ ಪೊಲೀಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿ ಖಾಕಿ ಕೈಗೆ ತಗ್ಲಾಕೊಂಡಿದ್ದರು. ಇದೀಗ ಮತ್ತೇ ಅದೇ ತಪ್ಪು ಮಾಡಿ ಲಾಕ್ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು