News Karnataka Kannada
Tuesday, April 16 2024
Cricket
ಉತ್ತರಕನ್ನಡ

ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ

Man falls into abyss at Agumbe Ghat
Photo Credit : News Kannada

ಹೆಬ್ರಿ: ಆಗುಂಬೆ ಘಾಟಿ 7ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕನೊಬ್ಬ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆ ನಡೆದಿದೆ. ಮಹಮ್ಮದ್ ಪಾಷಾ ಎಂಬಾತ ರಸ್ತೆ ಬದಿಯಲ್ಲಿದ್ದ ನಿಂತಿದ್ದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಕ್ಯಾಪ್ ಗಾಡಿಯಯನ್ನು ಟ್ರ್ಯಾಕ್ಟರ್ ಜೋಯಿಂಗ್ ಮಾಡುತ್ತಿದ್ದ ವೇಳೆ ಗಾಡಿ ಬ್ರೇಕ್‌ ಫೇಲ್ ಆದ ಹಿನ್ನೆಲೆಯಲ್ಲ ಮಹಮ್ಮದ್ ಪಾಷಾ ಅವರಿಗೆ ಗುದ್ದಿದೆ. ಈ ಕಾರಣದಿಂದ ಈ ಅವಘಡ ಸಂಭವಿಸಿದೆ.

ಆಗುಂಬೆ ಘಾಟ್ ನಿಂದ 25 ರಿಂದ 30 ಅಡಿ ಕೆಳಗಡೆ ಬಿದ್ದ ಪಾಷಾಗೆ ಗಂಭೀರ ಗಾಯವಾಗಿದ್ದು ಮೇಲಿನಿಂದ ಬಿದ್ದ ರಭಸಕ್ಕೆ ಪಾಷಾ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ, ಕೂಡಲೇ ಸ್ಥಳದಲ್ಲಿದ್ದಲಿದ್ದ ಹಿಂದೂ ಜಾಗರಣೆ ವೇದಿಕೆಯ ಸದಸ್ಯರು ಪಾಷಾ ಅವರನ್ನು ರಕ್ಷಿಸಿದ್ದಾರೆ.

ಹಿಂದು ಜಾಗರಣಾ ವೇದಿಕೆಯ ನಿತ್ಯಾನಂದ ನೇತೃತ್ವದ ತಂಡದಿಂದ ಆಗುಂಬೆ ಘಾಟ್‌ ಕೆಳಗಡೆ ಇಳಿದು ಬೆಡ್‌ ಶೀಟ್‌ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ. ಹಿಂದು ಜಾಗರಣಾ ವೇದಿಕೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು