Bengaluru 24°C
Ad

ಉಜನಿ ಅಣೆಕಟ್ಟಿನಲ್ಲಿ ದೋಣಿ ಮುಳುಗಡೆ: ಆರು ಜನ ನಾಪತ್ತೆ

ದೋಣಿ ಮುಳುಗಿ ಆರು ಜನ ನಾಪತ್ತೆಯಾದ ಪ್ರಕರಣ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸೀಲ್​​ ಸಮೀಪದ ಕಲಾಶಿ ಗ್ರಾಮದ ಬಳಿ ಉಜನಿ ಅಣೆಕಟ್ಟಿನ ನೀರಿನಲ್ಲಿ ದೋಣಿ ಮುಳುಗಡೆಯಾದ ಘಟನೆ ನಡೆದಿದೆ.

ಮಹಾರಾಷ್ಟ್ರ: ದೋಣಿ ಮುಳುಗಿ ಆರು ಜನ ನಾಪತ್ತೆಯಾದ ಪ್ರಕರಣ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸೀಲ್​​ ಸಮೀಪದ ಕಲಾಶಿ ಗ್ರಾಮದ ಬಳಿ ಉಜನಿ ಅಣೆಕಟ್ಟಿನ ನೀರಿನಲ್ಲಿ ದೋಣಿ ಮುಳುಗಡೆಯಾದ ಘಟನೆ ನಡೆದಿದೆ.

ನಗರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಪುಣೆ ಜಿಲ್ಲೆಯಲ್ಲಿ ದೋಣಿ ನಾಪತ್ತೆಯಾಗಿದೆ. ಪ್ರಾಥಮಿಕ ವರದಿಯಂತೆ ಆರು ಮಂದಿ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.  ದೋಣಿಯಲ್ಲಿರುವವರು ನೀರಿನಲ್ಲಿ ಮುಳುಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯಲ್ಲಿ ಒಟ್ಟು 7 ಜನರಿದ್ದರು ಅದರಲ್ಲಿ ಒಬ್ಬರು ಈಜಿ ಬದುಕುಳಿದಿದ್ದಾರೆ ಎಂದು ಪುಣೆಯ ವರಿಷ್ಠಾಧಿಕಾರಿ ಪಂಕಜ್​ ದೇಶಮುಖ್​ ತಿಳಿಸಿದ್ದಾರೆ. ಇನ್ನು ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad