Bengaluru 27°C
Ad

ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಬಂದ ಖಾಕಿ : ಪೂಂಜಾ ನಿವಾಸದಲ್ಲಿ ಬಿಜೆಪಿ ನಾಯಕರ ದಂಡು

Harish (2)

ಬೆಳ್ತಂಗಡಿ:  ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಆಗಮಿಸಿರುವ ಹಿನ್ನೆಲೆಯಲ್ಲಿ ಗರ್ಡಡಿಯ ನಿವಾಸಕ್ಕೆ ವಕೀಲರ ತಂಡ ಭೇಟಿ ನೀಡಿದ್ದಾರೆ. ಪೊಲೀಸರ ಜೊತೆ ವಕೀಲರ ತಂಡ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ.

ಇತ್ತ ಹರೀಶ್ ಪೂಂಜಾ ಮನೆಯ ಹೊರಗಡೆಯಲ್ಲಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು, ಪೊಲೀಸರು ಹಾಗೂ ಕಾರ್ಯಕರ್ತರ ನಡುವಿನ ಹೈಡ್ರಾಮಕ್ಕೆ ಹರೀಶ್ ಪೂಂಜಾ ನಿವಾಸ ಸಾಕ್ಷಿಯಾಗಿದೆ.

ಇನ್ನು ಬಿಜೆಪಿ ಶಾಸಕರ ಬಂಧನಕ್ಕೆ ಪೊಲೀಸರು ಸಿದ್ಧರಾಗಿರುವ ಹಿನ್ನೆಲೆಯಲ್ಲ ಸಂಸದ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್ ಸೇರಿದಂತೆ ಬಿಜೆಪಿ ನಾಯಕರ ದಂಡು ಗರ್ಡಡಿಯ ನಿವಾಸದತ್ತ ದೌಡಾಯಿಸಿದ್ದಾರೆ.

Ad
Ad
Nk Channel Final 21 09 2023
Ad