Bengaluru 26°C
Ad

ಕೊಹ್ಲಿಗೆ ಭದ್ರತಾ ಬೆದರಿಕೆ ಶಂಕೆ ಮೇರೆಗೆ ನಾಲ್ವರ ಬಂಧನ

ರಾಯಲ್​ ಚಾಲೆಂಜರ್​ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ಇಂದು ಎಲಿಮಿನೇಟೆಡ್​ ಪಂದ್ಯ ನಡೆಯಲಿಕ್ಕಿದೆ. ಆರ್​ಸಿಬಿ ಸುದ್ದಿಗೋಷ್ಠಿಯನ್ನ ರದ್ದುಗೊಳಿಸಿದೆ ಎಂಬ ಮಾತುಗಳು ಕೇಳಿಬಂದಿದ್ದು, ಜೊತೆಗೆ ಆರ್​ಸಿಬಿ ಅಭ್ಯಾಸವನ್ನು ಕೂಡ ರದ್ದು ಗೊಳಿಸಿದೆ.

ಆರ್​ಸಿಬಿ ಮಂಗಳವಾರದಂದು ಗುಜರಾತ್​​ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಬೇಕಾಗಿತ್ತು. ಆದರೆ ಯಾವುದೇ ಕಾರಣವನ್ನು ಬಿಚ್ಚಿಡದೆ ಆರ್​ಸಿಬಿ ಅಭ್ಯಾಸವನ್ನು ರದ್ದುಗೊಳಿಸಿತು. ಅತ್ತ ರಾಜಸ್ಥಾನ್​ ತಂಡ ಅಭ್ಯಾಸವನ್ನು ಮುಂದುವರೆಸಿತು. ವಿರಾಟ್​ ಕೊಹ್ಲಿಗೆ ಭದ್ರತಾ ಬೆದರಿಕೆ ಇರುವ ಕಾರಣ ಆರ್​ಸಿಬಿ ಸುದ್ದಿಗೋಷ್ಟಿ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಗುಜರಾತ್​ ಪೊಲೀಸರು ಸೋಮವಾರದಂದು ಭಯೋತ್ಪಾದಕರು ಎಂಬ ಶಂಕೆ ಮೇಲೆ ನಾಲ್ವರನ್ನು ಗುಜರಾತ್​​ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ವಿಚಾರಣೆ ನಡೆಸಿದ ಬಳಿಕ ಬಂಧಿತರ ಅಡುಗು ತಾಣವನ್ನು ಪತ್ತೆಹಚ್ಚಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad