Showing 20 of 2255 posts • Page 82 of 113
ವಿವಿಧ ಜಯಂತಿಗಳ ಆಚರಣೆಯ ಹಿನ್ನೆಲೆಯಲ್ಲಿ ನಂಜನಗೂಡು ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ತಾಯಿಯನ್ನೇ ಪಾಪಿ ಪುತ್ರ ಕೊಂದ ಘಟನೆ ಪಿರಿಯಾಪಟ್ಟಣ ತಾಲ್ಲೂಕು ನವಿಲೂರ ಗ್ರಾಮದಲ್ಲಿ ನಡೆದಿದೆ.
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮಂತ್ರ ಮಾಂಗಲ್ಯದ ಮೂಲಕ ಅಂತರ್ಜಾತಿ ವಿವಾಹದ ನವಜೀವನಕ್ಕೆ ಪ್ರೇಮಿಗಳು ಕಾಲಿಟ್ಟಿದ್ದಾರೆ. ನಂಜನಗೂಡು ಜನ ಸಂಗ್ರಾಮ ಪರಿಷತ್
ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಶ್ರೀ ಅಮ್ಮಕನಹಳ್ಳಿ ಮಾರಮ್ಮನವರ ಜಾತ್ರಾ ಮತ್ತು ಕೊಂಡೋತ್ಸವ ಅದ್ದೂರಿಯಾಗಿ ನಡೆಯಿತು.
ಮನೆ ಕಳ್ಳತನ ನಡೆದಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಮೂಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಪಕ್ಷದವರು ಮೀಸಲಾತಿ ವಿರೋಧಿಗಳು, ಕಾಂತರಾಜ್ ವರದಿಯ ಮುಖ್ಯ ಶಿಫಾರಸ್ಸು ಹಿಂದುಳಿದ ವರ್ಗದವರಿಗೆ ಮೀಸಲಾತಿ ಪ್ರಮಾಣ ಹೆಚ್ಚು ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೇಂದ್ರ ಸರ್ಕಾರವು ಗ್ಯಾಸ್ ,ಪೆಟ್ರೋಲ್, ಮತ್ತು ಡೀಸೆಲ್ ಬೆಲೆ ನಿರಂತರ ಏರಿಕೆಯನ್ನು ಖಂಡಿಸಿ ಶಾಸಕರಾದ ದರ್ಶನ್ ಧ್ರುವನಾರಾಯಣ್
ನಾಮಫಲಕ ಅಳವಡಿಸುವ ವಿಚಾರದಲ್ಲಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೋಕಿನ ತಲಕಾಡು ಗ್ರಾಮದಲ್ಲಿ ಮಾತಿನ ಚಕಮಕಿ ನಡೆದಿದೆ. ಮಧ್ಯೆ ಪ್ರವೇಶಿಸಿದ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿಯನ್ನು ತಾಲ್ಲೂಕು ಆಡಳಿತ ಕಾಟಾಚಾರಕ್ಕೆ ಆಚರಣೆ ಮಾಡುತ್ತಿದ್ದಾರೆ.
ಬೈಕ್, ಕಾರು ಭೀಕರ ಅಪಘಾತ, ತಾಯಿ ಮಗ ದುರಂತ ಸಾವು ಪ್ರಕರಣದಲ್ಲಿ ಬನ್ನೂರು ಸೇತುವೆಯಿಂದ ನೂರು ಮೀಟರ್ ದೂರದಲ್ಲಿ ತಾಯಿ ಶವ ಪತ್ತೆಯಾಗಿದೆ.
ಪುರಸಭೆ ಕಚೇರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯನ್ನು ಪುರಸಭೆ ಅಧ್ಯಕ್ಷೆ ವಸಂತಶ್ರೀಕಂಠ ಮುಖ್ಯಅಧಿಕಾರಿ ವಸಂತಕುಮಾರಿ ಪುರಸಭಾ ಸದಸ್ಯರುಗಳೊಡನೆ ಉದ್ಘಾಟನೆ ನೆರವೇರಿಸಿದರು.
ಪೆಟ್ರೋಲ್, ಡಿಸೇಲ್ ಹಾಗೂ ಸಿಲಿಂಡರ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಯುವ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ
ಬದನವಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯನ್ನು ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕ ಡಾ.ಎಂ ಕುಮಾರಸ್ವಾಮಿ ಅನಾವರಣಗಳಿಸಿದರು.
ಕಾಶಿಗಿಂತಲೂ ಗುಲಗಂಜಿಯಷ್ಟು ಪವಿತ್ರ ಕ್ಷೇತ್ರ ತಿ.ನರಸೀಪುರದ ಗುಂಜಾನರಸಿಂಹ ಸ್ವಾಮಿ ದೇಗುಲ. ಇಲ್ಲಿ ಇಂದು ವಿಜೃಂಭಣೆಯಿಂದ ಶ್ರೀ ಗುಂಜಾನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವ ನೆರವೇರಿಸಲಾಯಿತು.
ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ದಕ್ಷಿಣಕಾಶಿ ನಂಜನಗೂಡಿನಲ್ಲಿ ಐತಿಹಾಸಿಕ ಗೌತಮ ಪಂಚಮಹಾ ರಥೋತ್ಸವದ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿ
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲ್ಲೂಕು ಸಮಿತಿ ವತಿಯಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುಂದು ಕೊರತೆ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಸಮಿತಿ ವತಿಯಿಂದ ಹುಲ್ಲಹಳ್ಳಿ ಗ್ರಾಮ
ಮಿಸನ್ ಆಸ್ಪತ್ರೆ ಖಾಯಂ ನೌಕರರಿಗೆ ಕಳೆದ ಒಂಭತ್ತು ತಿಂಗಳಿಂದ ಆಡಳಿತ ಮಂಡಳಿ ಸಂಬಳ ನೀಡಲಿಲ್ಲ. ಮಿಸನ್ ಆಸ್ಪತ್ರೆ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಾಗಿದೆ.
ಜಮೀನು ವಿವಾದ ನಡೆದು ಒಂದೇ ಮನೆಯ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಜಮೀನಿನಲ್ಲೇ ಕುಟುಂಬಸ್ಥರು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಹುಣಸೂರು ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.