ನಂಜನಗೂಡು: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಆಟೋ ಚಾಲಕರನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನೀಡುವ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ನಂಜನಗೂಡಿನಲ್ಲಿ ಶ್ರೀ ಶನೇಶ್ವರ ಗೂಡ್ಸ್ ಸರಕು ಸಾಗಾಣಿಕೆ ಆಟೋ ಚಾಲಕರ ಸಂಘದ ವತಿಯಿಂದ ಆಗ್ರಹಿಸಲಾಯಿತು.
ನಂಜನಗೂಡು ನಗರದ ಎಪಿಎಂಸಿ ಆವರಣದಲ್ಲಿ ಶ್ರೀ ಶನೇಶ್ವರ ಗೂಡ್ಸ್ ಸರಕು ಸಾಗಾಣಿಕೆ ಆಟೋ ಚಾಲಕರ ಸಂಘದ ವತಿಯಿಂದ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಗೂಡ್ಸ್ ಸರಕು ಸಾಗಾಣಿಕೆಯ ಆಟೋ ಚಾಲಕರಾಗಿದ್ದೇವೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಾಗಿದ್ದು, ನಮಗೆ ಯಾವುದೇ ಭದ್ರತಾ ಸೌಲಭ್ಯಗಳು ಬರುತ್ತಿಲ್ಲ. ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ವಾಹನ ಚಾಲಕರಾದ ನಮಗೆ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯನ್ನು ಕಲ್ಪಿಸಿಲ್ಲ.

11 ವಲಯಗಳ ಕಾರ್ಮಿಕರನ್ನು ಗುರುತಿಸಿ ಅವರಿಗೆ ಮಂಡಳಿಯಿಂದ ಗುರುತಿನ ಚೀಟಿ ಮತ್ತು ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಆಟೋ ಚಾಲಕರು ವಂಚಿತರಾಗಿದ್ದಾರೆ. ಅವರಿಗೆ ಪಿಎಸ್ಐ ಮತ್ತು ಪಿಎಫ್ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಜಂಟಿ ಕಾರ್ಯದರ್ಶಿಗೆ ಈಗಾಗಲೇ ಪತ್ರ ಬರೆದಿದ್ದೇವೆ. ಈ ಕೂಡಲೇ ಸಂಘದ ಮನವೇ ಎಂದು ಪರಿಗಣಿಸಿ ಅಸಂಘಟಿತ ವಲಯ ಕಾರ್ಮಿಕರೆಂದು ಪರಿಗಣಿಸಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಶನೇಶ್ವರ ಗುಡ್ಸ್ ಸರಕು ಸಾಗಾಣಿಕೆ ಆಟೋ ಚಾಲಕರ ಸಂಘದ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ರವೀಂದ್ರನ್, ಪ್ರಧಾನ ಕಾರ್ಯದರ್ಶಿ ರಾಜೇಶ್, ಖಜಾಂಚಿ ರಮೇಶ್, ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಸ್ವಾಮಿ, ಹರೀಶ, ಸುರೇಶ್, ರವಿ, ರಾಜೇಶ್, ಪ್ರಭು, ಶಿವಮೂರ್ತಿ, ಮಹದೇವ ನಾಯಕ, ಪ್ರಕಾಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

