ಮೈಸೂರು: ನಾಗರಹೊಳೆ ಅಭಯಾರಣ್ಯಕ್ಕೆ ಬೇಸಿಗೆ ಬಿಸಿ ತಟ್ಟಿದ್ದು, ಬೇಸಿಗೆ ಆರಂಭದಲ್ಲೇ ಕೆರೆ ಕಟ್ಟೆಗಳು ಭತ್ತಿದೆ. ಕಾಡು ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಮುಂದಾಗಿದೆ. ಭತ್ತಿದ ಕೆರೆ ಕಟ್ಟೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ನೀರನ್ನರಸಿ ಕಾಡಿನಿಂದ ನಾಡಿನತ್ತ ಪ್ರಾಣಿಗಳು ಬರುವುದನ್ನು ತಡೆಯಲು ಯತ್ನ ಮಾಡಲಾಗಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ಸರಿಸುಮಾರು 256 ಕೆರೆಗಳು ಇವೆ. 27 ಕೆರೆಗಳಿಗೆ ಸೋಲಾರ್ ಪಂಪ್ ಮೂಲಕ ನೀರು ಸಪ್ಲೈ ಮಾಡಲಾಗುತ್ತಿದೆ.

ಅವಶ್ಯಕತೆ ಇರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ಸಿಬ್ಬಂದಿ ನೀರು ತುಂಬಿಸುತ್ತಿದ್ದಾರೆ. ಅರಣ್ಯ ಇಲಾಖೆಗೆ ನೀರು ಪೂರೈಕೆ, ಕಾಡ್ಗಿಚ್ಚು ತಡೆ ದೊಡ್ಡ ಸವಾಲಾದ ಕೆಲಸವಾಗಿದೆ.