ನಂಜನಗೂಡು: ನಗರದ ಕೃಷಿ ಮಾರುಕಟ್ಟೆಯ ಸಭಾಂಗಣದಲ್ಲಿ ಮಾತೆ ರಮಾಬಾಯಿ ಅಂಬೇಡ್ಕರ್ ರವರ ಜಯಂತಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಸರಳವಾಗಿ ಆಚರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿದರು. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾರೆ ಎನ್ನುವುದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವಲದಲ್ಲಿ ಮಾತೆ ರಮಾ ಬಾಯಿಯವರ ಜವಾಬ್ದಾರಿಯನ್ನು ನೋಡಿದಾಗ ಅಕ್ಷರಷ ಸತ್ಯ.

ರಮಾಬಾಯಿರವರು 1898 ಫೆಬ್ರವರಿ 7ರಂದು ದಪೋಲಿಯ ವನಂದರ್ ಗ್ರಾಮದ ದತ್ರಿ ಮತ್ತು ರುಕ್ಮಿಣಿ ದಂಪತಿಗಳ ಎರಡನೆಯ ಮಗಳಾಗಿ ಜನಿಸಿ ಕೇವಲ 9ವರ್ಷಕ್ಕೆ ಅಂಬೇಡ್ಕರ್ ರವರ ಜೊತೆ ವಿವಾಹವಾಗಿ ಅತೀ ಚಿಕ್ಕ ವಯಸ್ಸಿಗೆ ಸಂಸಾರದ ಜವಾಬ್ದಾರಿಯನ್ನು ಹೊತ್ತು ಯಶಸ್ವಿ ಮಹಿಳೆಯಗಿದ್ದರು. ಬಾಬಾ ಸಾಹೇಬರಂತೆಯೇ ಅವರು ಸಹ ಇಡೀ ಶೋಷಿತ ಸಮುದಾಯವೇ ನನ್ನ ಕುಟುಂಬ ಎಂದು ಬದುಕಿದವರು. ಅವರ ನಾಲ್ಕು ಮಕ್ಕಳ ಮರಣದ ನೋವನ್ನು ಅಂಬೇಡ್ಕರ್ ರವರಿಗೆ ಪ್ರಭಾವ ಬೀರದಂತೆ ತಾವೇ ಅನುಭವಿಸಿದ ಧೀಮಂತ ಮಹಿಳೆ.

ಎಲ್ಲಾ ನೋವನ್ನು ತಾವೇ ನುಂಗಿ ಅಂಬೇಡ್ಕರ್ ರವರ ವಿದ್ಯಾಭ್ಯಾಸ ಮತ್ತು ಹೋರಾಟಗಳಿಗೆ ಅಡಚಣೆಯಾಗದಂತೆ ಸ್ಪೋತಿಯಾಗಿದ್ದರು. ಬಾಬಾ ಸಾಹೇಬ್ ರವರು ಲಂಡನ್ ನಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಮುಂಬೈನ ಬಂದರಿನಲ್ಲಿ ಬಂದು ಇಳಿದಾಗ ಅವರನ್ನು ಬರಮಾಡಿಕೊಳ್ಳಲು ಹೋಗಲು ಒಂದು ಒಳ್ಳೆಯ ಸೀರೆ ಇಲ್ಲದ ಕಾರಣ ಬರೋಡಾ ಮಹಾರಾಜರು ಬಾಬಾ ಸಾಹೇಬರಿಗೆ ಸನ್ಮಾನಿಸುವಾಗ ಹಾಕಿದ ಒಂದು ಶಲ್ಯವನ್ನೇ ಧರಿಸಿಕೊಂಡು ಹೋಗಿ ಬರಮಾಡಿಕೊಂಡ ಉದಾಹರಣೆ ಇದೆ.ಬಾಬಾ ಸಾಹೇಬರ ಎಲ್ಲಾ ಸಾಧನೆಗೆ ಸ್ಫೂರ್ತಿಯಾಗಿ ನಿಂತು ಕೋಟ್ಯಾಂತರ ಜನ ಶೋಷಿತರ ಮುಕ್ತಿಗೆ ಕಾರಣವಾದ ಮಹಾಮಾತೆ ರಮಬಾಯಿ ಅವರನ್ನು ಇಡೀ ದೇಶ ನೆನೆಯುವಂತಾಗಿದೆ ಎಂದು ಹೇಳಿದರು .

ಹಾಗೆಯೇ ಇತ್ತೀಚೆಗೆ ಹೆಚ್.ಡಿ ಕೋಟೆಯ ದಲಿತ ಚಳುವಳಿಯ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆಯವರು ದುರುದ್ದೇಶದಿಂದ ಕೇಸು ದಾಖಲಿಸುವ ಮುಖಾಂತರ ಚಳುವಳಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಶಾಸಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಕೆಲವು ಶಾಸಕರುಗಳು ಈ ರೀತಿಯ ದಲಿತ ವಿರೋಧಿ ನೀತಿಗಳನ್ನು ಅನುಸರಿಸುವುದರ ಮುಖಾಂತರ ದಲಿತರ ಒಗ್ಗಟ್ಟನ್ನು ಹೊಡೆಯುವ ಪ್ರಯತ್ನ ಮಾಡುವವರ ವಿರುದ್ಧ ಸಂಘಟನೆ ಗಂಭೀರವಾಗಿ ಪರಿಗಣಿಸಿ ಎಚ್ಚರಿಸಲಾಯಿತು. ಮಾರ್ಚ್ ತಿಂಗಳಲ್ಲಿ ನಡೆಯುವ ಹೆಚ್‍.ಡಿ ಕೋಟೆಯ ಸಮಾವೇಶಕ್ಕೆ ತಾಲ್ಲೂಕಿನಿಂದ ನೂರಾರು ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ದೇವರಸನಹಳ್ಳಿ ಬಸವರಾಜು, ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದರಾಜು, ಬಸವಟ್ಟಿಗೆ ಕೃಷ್ಣಮೂರ್ತಿ, ಮಹದೇವಸ್ವಾಮಿ ಹಳೇಪುರ, ಕೋಡಿ ನರಸೀಪುರ ಬಸವರಾಜು, ತಗಡೂರು ಬಸವರಾಜು, ಲೋಕೇಶ್, ಕೇಶವಮೂರ್ತಿ, ಆನಂದ, ನಾರಾಯಣಸ್ವಾಮಿ, ಮಧು, ಹೂವಯ್ಯ ಹಾಜರಿದ್ದರು.