ನಂಜನಗೂಡು: ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ.ಕೆ ಪ್ರಕಾಶ್ ಉಪಾಧ್ಯಕ್ಷರಾಗಿ ಕೆ.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘದ ಆವರಣದಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಜಿ.ಕೆ ಪ್ರಕಾಶ್, ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಪ್ರಕಾಶ್ ನಾಮಪತ್ರ ಸಲ್ಲಿಸಿದರು. ಬೇರೆ ಯಾರು ನಾಮಪತ್ರವನ್ನು ಸಲ್ಲಿಸದ ಕಾರಣ ನೂತನ ಅಧ್ಯಕ್ಷರಾಗಿ ಜಿ.ಕೆ ಪ್ರಕಾಶ್, ಉಪಾಧ್ಯಕ್ಷರಾಗಿ ಕೆ.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಕೆ.ಸಿ ರಘು ಘೋಷಣೆ ಮಾಡಿದರು. ಅಧ್ಯಕ್ಷರನ್ನು ಘೋಷಣೆ ಮಾಡುತ್ತಿದ್ದಂತೆ ಸಹಕಾರ ಸಂಘದ ನಿರ್ದೇಶಕರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ಜಿ.ಕೆ ಪ್ರಕಾಶ್ ಮಾತನಾಡಿ, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಯಾವುದೇ ರಾಜಕೀಯವನ್ನು ಮಾಡಿದೆ 30 ವರ್ಷಗಳಿಂದಲೂ ಕೂಡ ಈ ಸಂಸ್ಥೆ ಪಕ್ಷತೀತವಾಗಿ ನಡೆದುಕೊಂಡು ಬಂದಿದೆ. ಇಲ್ಲಿ ನಾವು ಯಾವುದೇ ರಾಜಕೀಯವನ್ನು ಮಾಡುತ್ತಿಲ್ಲ. ಪಕ್ಷತಿತವಾಗಿ ಈ ಬಾರಿ ಚುನಾವಣೆಯನ್ನು ಎದುರಿಸಿದ್ದೇವೆ. ಅನಿವಾರ್ಯ ಕಾರಣಗಳಿಂದ ಚುನಾವಣೆಯನ್ನು ನಡೆಸಲಾಯಿತು.

ಆರನೇ ಬಾರಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನನಗೆ ಸಂತಸ ತಂದಿದೆ. ಎರಡು ಬಾರಿ ಅವಿರೋಧವಾಗಿ ಆಯ್ಕೆ ಮಾಡಿದ್ದೀರಿ. ದೊಡ್ಡ ಕವಲಂದೆ ಗ್ರಾಮವನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ. ನಂಜನಗೂಡು ತಾಲ್ಲೂಕಿನಲ್ಲಿ ದೊಡ್ಡ ಕವಲಂದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾಥಮಿಕ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ನನ್ನ ಸ್ವಯಚೆಯಿಂದ ಅಧ್ಯಕ್ಷ ಸ್ಥಾನವನ್ನು ದಳಪತಿ ಕೆ.ಮಹದೇವಪ್ಪ ಅವರಿಗೆ ಬಿಟ್ಟುಕೊಡುತ್ತೇನೆ. ಷೇರುದಾರರನ್ನು ಗುರುತಿಸಿ ಅವರಿಗೆ ಸಾಲ ಕೊಡಿಸುವ ಕೆಲಸ ಮಾಡುತ್ತೇವೆ.

ಈಗಾಗಲೇ ಸುಮಾರು 10 ಕೋಟಿ ರೂ. ಸಾಲವನ್ನು ಕೊಟ್ಟಿದ್ದೇವೆ. 120 ಷೇರುದಾರಿಗೆ 1.20 ಕೋಟಿ ರೂ. ಸಾಲ ಬಿಡುಗಡೆಯಾಗಿದೆ. ಆದರೆ ಅದು ಇನ್ನೂ ಬಂದಿಲ್ಲ. ಸಾಲ ಬಂದ ತಕ್ಷಣ ಸಾಲವನ್ನು ಕೊಡಿಸಲು ಮುಂದಾಗುತ್ತೇವೆ‌ ಎಂದರು.

ಪಡಿತರ ಪದಾರ್ಥಗಳ ವಿತರಣೆಯಲ್ಲಿ ಯಾವುದೇ ಲೋಪ ದೋಷ ಆಗದಂತೆ ನೋಡಿಕೊಳ್ಳುತ್ತೇವೆ. ರೈತರನ್ನು ಗುರುತಿಸಿ ಅವರಿಗೆ ಸದಸ್ಯತ್ವವನ್ನು ನೀಡುತ್ತೇವೆ. ಇನ್ನು 600ಕ್ಕೂ ಹೆಚ್ಚು ಜನರಿಗೆ ಸಾಲ ಸೌಲಭ್ಯಗಳನ್ನು ಕೊಡುವ ಗುರಿ ಹೊಂದಿದ್ದೇವೆ. ಕೋಣನಪುರ, ಕೋಣನೂರು ಪಾಳ್ಯಕ್ಕೆ ಪಡಿತರ ತಲುಪಿಸಲು ಅಲ್ಲಿಗೆ ಸಂಬಂಧಪಟ್ಟ ಶಾಸಕರನ್ನು ಸಂಪರ್ಕ ಮಾಡಿ ಅವರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ಮಹದೇವಪ್ಪ, ಚಿಕ್ಕ ಬಸವಣ್ಣ, ನಾಗಣ್ಣ, ಮಹೇಶ್, ಸುರೇಶ್, ರಮೇಶ್, ನಿಸಾರ್ ಅಹಮದ್, ಗೀತಾ, ಪೂರ್ಣಮ್ಮ, ಕೆ.ಸಿ ಮಹದೇವಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಶಿವಪ್ಪ, ಗ್ರಾ.ಪಂ ಸದಸ್ಯರಾದ ನಸರುಲ್ಲಾಖಾನ್, ಪ್ರಶಾಂತ್ ಕುಮಾರ್, ಕೋಣನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವಣ್ಣ, ಮುಖಂಡರಾದ ಸತೀಶ್, ಮನು, ಎಸ್.ಮಹೇಶ್, ಹರಗನಪುರ ಶಿವಪ್ಪ, ಶಿವಪ್ಪದೇವರು, ಎಂ.ಸಿದ್ದರಾಜು, ಬಾಬು, ಪಟೇಲ್ ಮಾದಪ್ಪ, ಗಟ್ಟವಾಡಿ ಮಹದೇವಯ್ಯ‌ ಸೇರಿದಂತೆ ಹಲವರು ಭಾಗವಹಿಸಿದ್ದರು.