Showing 20 of 2105 posts • Page 80 of 106
ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಕೊಡಬೇಕಾಗಿದ್ದ ಅಕ್ಕಿಯಲ್ಲಿ ಮೋಸ ಆಗುತ್ತಿರುವುದನ್ನು ಗಮನಿಸಿದ ಬಿಪಿಎಲ್ ಪಡಿತದಾರರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರ ಗಮನಕ್ಕೆ ಫೋನ್ನಲ್ಲಿ ತಿಳಿಸಲಾಯಿತು.
ಸರ್ಕಾರಿ ಶಾಲೆಯ ಮಕ್ಕಳ ಜೀವದ ಜೊತೆ ಶಾಲಾ ಶಿಕ್ಷಕರು ಚೆಲ್ಲಾಟವಾಡುತ್ತಿದ್ದಾರೆ. ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಂಜನಗೂಡು ತಾಲ್ಲೂಕಿನ ಹುಸ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 75ನೇ ಅಮೃತ ಮಹೋತ್ಸವವನ್ನು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ದಲಿತರಿಗೆ ಶವಸಂಸ್ಕಾರ ಮಾಡಲು ಸ್ಮಶಾನವಿಲ್ಲದೆ ದಲಿತರು ಪರದಾಡುತ್ತಿದ್ದಾರೆ ಕೂಡಲೇ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸ್ಮಶಾನ ಭೂಮಿಯನ್ನು ನೀಡಬೇಕು
ಇತಿಹಾಸ ಪ್ರಸಿದ್ದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಸೋಮನಾಥಪುರ ಜಾತ್ರಾ ಮಹೋತ್ಸವದ ಜಯಲಕ್ಷ್ಮಿ ಅಮ್ಮನವರ ಉತ್ಸವ ಅದ್ದೂರಿ
ಮೈಸೂರಿನ ಹೆಬ್ಬಾಳದ ರಿಂಗ್ ರಸ್ತೆಯಲ್ಲಿರುವ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಆಯೋಜನೆಗೊಂಡಿರುವ ಗಾಂಧಿ ಶಿಲ್ಪ ಬಜಾರ್ ಜನರ ಮನ ಸೆಳೆಯುತ್ತಿದೆ.
ಕೃಷಿ ಪತ್ತಿನ ಸಹಕಾರ ಸಂಘಕ್ಕೆ 75.44 ಲಕ್ಷ ನಾಮ ಹಾಕಿದ್ದು, ಮಾಜಿ ಸಿಇಓ ನಾರಾಯಣ ನಾಯ್ಕ ಮೇಲೆ ಎಫ್ಐಆರ್ ದಾಖಲಾಗಿರುವ ಘಟನೆ ಹುಣಸೂರು ತಾಲ್ಲೂಕಿನ ಧರ್ಮಾಪುರದಲ್ಲಿ ನಡೆದಿದೆ.
ನಡು ರಸ್ತೆಯಲ್ಲಿ ಗೂಡ್ಸ್ ವಾಹನ ಹೊತ್ತಿ ಉರಿದ ಘಟನೆ ಕರ್ನಾಟಕ- ಕೇರಳ ಗಡಿಯಾದ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್ ಬಳಿ ನಡೆದಿದೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಆಗುತ್ತಿದೆ. ಅದನ್ನು ಪ್ರಶ್ನೆ ಮಾಡುವ ಅಧಿಕಾರ ವಿಪಕ್ಷಗಳಿಗಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಿಡಿಕಾರಿದರು.
ನಿಯಮಭಾರವಾಗಿ ವೈದ್ಯರ ಕಾರ್ಯನಿರ್ವಹಣೆ ಮತ್ತು ಸರ್ಕಾರಿ ಸಾರ್ವಜನಿಕರ ವೈದ್ಯರ ಕರ್ತವ್ಯ ಲೋಪ ಖಂಡಿಸಿ ದಸಂಸ ಸಂಚಾಲಕ ಕುಕ್ಕೂರು ರಾಜರ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು.
ಬನ್ನೂರು ಹೋಬಳಿಯ ಚಾಮುನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳ ಸ್ಥಾನದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಸಲಾಯಿತು.
ಐಜಿಡಿ, ಸ್ಮಾರ್ಟ್ ಇಂಡಿಯಾ ಐಟಿಸಿ ಕೋಟೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೆ ಇವರ ಸಹಯೋಗದಲ್ಲಿ ಇಂದು ಪೋಷಣ್ ಮೇಳ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ನಂಜನಗೂಡು ತಾಲ್ಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ಬಳಿ ಹಾದು ಹೋಗಿರುವ ಕಬಿನಿ ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿಗೆ ಕೊಳಚೆ ಚರಂಡಿ ನೀರು ಸೇರಿಕೊಂಡು ದುರ್ನಾತ ಬೀರುತ್ತಿದೆ. ಕಪಿಲೆಯ ಒಡಲಿಗೆ ಪಟ್ಟಣದ ಕೊಳಚೆ ನೀರು ಹಾಗೂ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದ ಕೊಳಚೆ ನೀರು ಸೇರಿ ಮಲಿನವಾಗುತ್ತಿದೆ.
ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಆಸ್ತಿ ವಿವರ ಲಭ್ಯವಾಗುವಂತ ವ್ಯವಸ್ಥೆ ರೂಪಿಸಬೇಕು. ಪ್ರತಿವರ್ಷ ಆಸ್ತಿ ವಿವರವನ್ನು ಪೋರ್ಟಲ್ನಲ್ಲಿ ಅಪ್ ಲೋಡ್ ಮಾಡಬೇಕು.
ಏಪ್ರಿಲ್ 20 ರಂದು ಮೈಸೂರಿನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾವೇಶ ನಡೆಸಲು ಚಿಂತನೆ ನಡೆಸಿದೆ. ಇಂದು ಸಮಾವೇಶ ಕುರಿತು ಮೈಸೂರಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಡಿಸಿಎಂ ನಟ್ಟು ಬೋಲ್ಟ್ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಸಿಎಂ ತಾಲಿಬಾನ್ ಸರಕಾರ ನಡೆಸುತ್ತಿದ್ದಾರೆ. ಡಿಸಿಎಂ ಗೂಂಡಗಿರಿ ಸರಕಾರ ನಡೆಸುತ್ತಿದ್ದಾರೆ.
ಮೈಸೂರಿನ ಕ್ಯಾತಮಾರಹಳ್ಳಿ ಮಸೀದಿ ರೀಓಪನ್ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. ರಾಜು ಹತ್ಯೆ ಬಳಿಕ ಅನಧಿಕೃತ ಮಸೀದಿ ಬಂದಾಗಿತ್ತು.
ಬೇಸಿಗೆ ಆರಂಭದಲ್ಲೇ ಉರಿ ಬಿಸಿಲು ಹೆಚ್ಚಾಗಿದ್ದು, ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಬೇಸಿಗೆ ಬಿಸಿ ತಟ್ಟಿದೆ. ತಂಪನ್ನೆರೆಯಲು ಮೃಗಾಲಯ ಸಿಬ್ಬಂದಿ ಮುಂದಾಗಿದ್ದಾರೆ.
ಕೊಡಗು ಮೂಲದ ಕ್ಯಾಪ್ಟನ್ ಮಾಲೇಟಿರ ನಿತಿನ್ ಕಾರ್ಯಪ್ಪ ಭಾರತೀಯ ನೌಕಾಪಡೆಯ ಕಮಾಡಿಂಗ್ ಆಫೀಸರ್ ಆಗಿ ಕೊಲ್ಕತ್ತಾದ ಐಎನ್ಎಸ್ ನಲ್ಲಿ ನೇಮಕಗೊಂಡಿದ್ದಾರೆ.