Showing 20 of 2247 posts • Page 60 of 113
ಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದ ಆಯೋಗ ಸಲ್ಲಿಸಿರುವ ಒಳ ಮೀಸಲಾತಿ ವರದಿಯನ್ನು ಸರ್ಕಾರ ತಿರಸ್ಕಾರ ಮಾಡಬೇಕು ಎಂದು ನಂಜನಗೂಡಿನಲ್ಲಿ ಬಲಗೈ ಸಂಬಂಧಿಸಿದ ಜಾತಿಗಳ ಕ್ರಿಯಾ ಸಮಿತಿ ನಂಜನಗೂಡು ಒತ್ತಾಯಿಸಿದೆ.
ವರುಣ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ 78ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಂಜನಗೂಡು ತಾಲ್ಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ಶ್ರೀ ಶನೇಶ್ವರಸ್ವಾಮಿಯವರ ಜಾತ್ರಾ ಮಹೋತ್ಸವವು ಇದೇ ಆ.16 ರಂದು ಶನಿವಾರ ನಡೆಯಲಿದೆ.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2025 ಹಿನ್ನಲೆ ಗಜಪಡೆ ತಾಲೀಮು ಆರಂಭಿಸಿದೆ. ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಇಂದಿನಿಂದ ತಾಲೀಮು ಆರಂಭಗೊಂಡಿದೆ.
ಮೈಸೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪ್ರಕರಣ ಹೆಚ್ಚಾಗಿದ್ದು, ನೂರಾರು ಕೋಟಿ ಡ್ರಗ್ಸ್ ಸಿಕ್ಕ ಬೆನ್ನಲ್ಲೆ ಪೊಲೀಸರು ಅಲರ್ಟ್ ಆಗಿದ್ದಾರೆ.
ಹೆಚ್.ಡಿ ಕೋಟೆ ತಾಲ್ಲೂಕಿನ ಎನ್ ಬೇಗೂರು ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶೌಚಾಲಯ ಉಪಯೋಗಕ್ಕೆ ಬಾರದೆ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಮೈಸೂರು ನಾಡ ಹಬ್ಬ ದಸರಾ ಮಹೋತ್ಸವ 2025 ರ ದಸರಾ ಗಜಪಡೆಗೆ ತೂಕ ಪರಿಶೀಲನೆ ನಡೆಸಲಾಯಿತು. ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಆನೆಗಳು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ವೇಯ್ಟ್ ಚಕ್ ಮಾಡಲಾಯಿತು.
ಕ್ಷುಲಕ ಕಾರಣಕ್ಕೆ ಯುವಕರ ಗುಂಪು ಲಾಂಗು ಮಚ್ಚು ಹಿಡಿದು ಹೊಡೆದಾಡಿದ್ದಾರೆ. ತಮಾಷೆಗಾಗಿ ವ್ಯಕ್ತಿಯನ್ನು ರೇಗಿಸುತ್ತಿದ್ದೆ ಹಲ್ಲೆಗೆ ಕಾರಣವಾಗಿದ್ದು, ನಡುರಸ್ತೆಯಲ್ಲಿ ಲಾಂಗು ಮಚ್ಚು ಹಿಡಿದವರನ್ನು ಕಂಡು ನಂಜನಗೂಡು ಜನ ಬೆಚ್ಚಿ ಬಿದ್ದಿದ್ದಾರೆ.
ಬಿಡಾಡಿ ದನಗಳ ಹಾವಳಿಗೆ ವಾಹನ ಸವಾರರು ಬಳಲಿ ಬೆಂಡಾಗಿದ್ದರು. ಸದ್ಯ, ದನಗಳ ಹಾವಳಿಗೆ ಗುಂಡ್ಲುಪೇಟೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.
ಜಮೀನಿಗೆ ನೀರು ಬಿಡುವ ವಿಚಾರಕ್ಕೆ ಕಿರಿಕ್ ನಡೆದು ಕೈಯಲ್ಲಿದ್ದ ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾದ ವಿಡಿಯೋ ವೈರಲ್ ಆಗಿದೆ. ಸಾಲಿಗ್ರಾಮ ತಾಲೂಕಿನಲ್ಲಿ ಈ ಘಟನೆ ಸಂಭವಿಸಿದೆ.
ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಹದಿನಾರು ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವರುಣ ವಿಧಾನಸಭಾ ಕ್ಷೇತ್ರದಲ್ಲಿ 1107.72 ಕೋಟಿ ರೂ ವೆಚ್ಚ
ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬರುವ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗೇಟ್ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ರಸ್ತೆ ಕಾಮಗಾರಿ ನಡೆಯುತ್ತಿದೆ.
ಹದಿನಾರು ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಸುನೀಲ್ ಬೋಸ್ ಮಾತನಾಡಿ, ವರುಣ ಕ್ಷೇತ್ರದ ಜನರು ಅದೃಷ್ಟವಂತರಾಗಿದ್ದಾರೆ.
ತಲಾ ಆದಾಯದಲ್ಲಿ ಕರ್ನಾಟಕವೇ ಒಂದನೇ ಸ್ಥಾನದಲ್ಲಿದೆ. ಜಿಎಸ್ ಟಿ ಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ
ಮತಗಳ್ಳನದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ರಾಹುಲ್ ಗಾಂಧಿ ಹೇಳಿರುವ ಕೆಲವು ವಿಚಾರಗಳು ಸತ್ಯ ಇದೆ.
ತ್ತವರು ಕೆಟ್ಟವರು ಮತ ಹಾಕಿ ನನ್ನ ಗೆಲ್ಸಿದ್ರು, ಸಿದ್ದರಾಮಯ್ಯ ಭಾಷಣ ವೈರಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಅದು ಸಾಧ್ಯ ಇದ್ಯಾ..? ಸತ್ತವ್ರು ಮತ ಹಾಕಕ್ಕೆ ಆಗುತ್ತಾ..? ನಾನು ಆ ರೀತಿ ಮಾತೇ ಆಡಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಸಿದರು. ಸ್ಥಳೀಯ ಶಾಸಕರು, ಮುಖಂಡರ ಸಾಥ್ ನೀಡಿದರು.
ಗೃಹಲಕ್ಷ್ಮಿ ಹಣದಲ್ಲಿ ವರ ಮಹಾಲಕ್ಷ್ಮಿ ಹಬ್ಬ ಆಚರಿಸಿದ್ದು, ಸಿಎಂ ಸಿದ್ದರಾಮಯ್ಯಗೆ ಒಳಿತಾಗಲೆಂದು ಮಹಿಳೆ ಪೂಜೆ ಸಲ್ಲಿಸಿದರು.
ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನೆರವೇರಲಿದೆ.
ಕಬ್ಬಿಣದ ರಾಡು ಮತ್ತು ಡ್ರ್ಯಾಗರ್ ಹಿಡಿದು ಮದ್ಯದಂಗಡಿಯಲ್ಲಿ ನಗದು ದೋಚಿ ಖದೀಮರು ಪರಾರಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.