ಗುಂಡ್ಲುಪೇಟೆ : ಪಟ್ಟಣದ ಕೆ ಎಸ್ ಆರ್ಟಿಸಿ ಮುಂಭಾಗದಲ್ಲಿನ ಸ್ತ್ರೀ ಶಕ್ತಿ ಭವನದ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನ ವ್ಯಕ್ತಿಯೊಬ್ಬ ಕದ್ದೊಯ್ದಿರುವ ಘಟನೆ ಭಾನುವಾರ ನಡೆದಿದ್ದು ಆಸಾಮಿಯ ಚಲನವಲನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬನ್ನಿತಾಳಪುರ ಗ್ರಾಮದ ಶಿವಣ್ಣ ಎಂಬವರ ಕೆ ಎ 10 ಎಚ್ 9163 ನೋಂದಣೀಯ ದ್ವಿಚಕ್ರವಾಹನವನ್ನ ವ್ಯಕ್ತಿಯೋರ್ವ ಅಪಹರಿಸಿದ್ದಾನೆ. ಭಾನುವಾರ ಕೆಲಸದ ನಿಮಿತ್ತ ಸ್ತ್ರೀ ಶಕ್ತಿ ಭವನದ ಮುಂಭಾಗ ಪಾರ್ಕ್ ಮಾಡಿ ಹೋಗಿದ್ದ ಶಿವಣ್ಣ ಅವರು ವಾಪಾಸ್ ಬರುವಷ್ಟರಲ್ಲಿ ಬೈಕ್ ಕಳುವಾಗಿರುವುದು ಗೊತ್ತಾಗಿದೆ ಬಳಿಕ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ಕ್ಯಾಮರಗಳನ್ನ ಪರಿಶೀಲಿಸಲಾಗಿ ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.