ಮೈಸೂರು : ತಂಬಾಕು ಹದಗೊಳಿಸುವ ವೇಳೆ ಆಕಸ್ಮಿಕ ಬೆಂಕಿ ತಗಲಿ ಬ್ಯಾರೇನ್ ಸಂಪೂರ್ಣ ಭಸ್ಮವಾಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ನಡೆದಿದೆ.
ಗ್ರಾಮದ ವಿಶ್ವೇಶ್ವರಯ್ಯ ಎಂಬುವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರೇನ್ ಆಗಿದ್ದು, ಸುಮಾರು 5 ಲಕ್ಷದಷ್ಟು ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಮತ್ತು ಕಟ್ಟೆಮಳಲವಾಡಿ ವಿಭಾಗದ ತಂಬಾಕು ಮಂಡಳಿಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ತಂಬಾಕು ಮಂಡಳಿಯಿಂದ ಸಿಗುವ ನಷ್ಟ ಪರಿಹಾರ ಒದಗಿಸುವ ಭರವಸೆಯಲ್ಲಿದ್ದಾರೆ.

