ಮೈಸೂರು: ಬೊರೂಕಾ ಅಲ್ಯೂಮಿನಿಯಂ ಫ್ಯಾಕ್ಟರಿಯ ಇಂಜಿನಿಯರ್ ಮನೆಯಲ್ಲಿ ಬೆಳ್ಳಿಹಾಗೂ ಚಿನ್ನದ ಆಭರಣಗಳನ್ನ ಕಳುವು ಮಾಡಿದ್ದ ಡ್ರೈವರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿಯಿಂದ ಮೇಟಗಳ್ಳಿ ಠಾಣೆ ಪೊಲೀಸರು 6.19 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಲೋಕನಾಯಕನಗರದ ವಿಜಯಸಾಯಿ ಕಳುವು ಮಾಡಿ ಸಿಕ್ಕಿಬಿದ್ದ ಆರೋಪಿ.ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮಂಜೇಗೌಡ ಎಂಬುವರ ಮನೆಯಲ್ಲಿ ಕಳುವುಮಾಡಿದ ವಿಜಯಸಾಯಿ ಸಿಕ್ಕಿಬಿದ್ದಿದ್ದಾನೆ.
ಹಲವಾರು ವರ್ಷಗಳಿಂದ ವಿಜಯಸಾಯಿ ಕಾರ್ ಡ್ರೈವರ್ ಆಗಿ ಮಂಜೇಗೌಡ ರವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ನಂಬಿಕಸ್ತನಾಗಿದ್ದ ವಿಜಯಸಾಯಿ ತನ್ನ ಸಾಲ ತೀರಿಸಿಕೊಳ್ಳಲು ಸಂಚು ರೂಪಿಸಿ ದಿನೇ ದಿನೇ ಮನೆಯಲ್ಲಿದ್ದ ಬೆಳ್ಳಿ ಹಾಗೂ ಚಿನ್ನದಪದಾರ್ಥಗಳನ್ನ ಕಳ್ಳತನ ಮಾಡಿ ಗಿರವಿ ಇಟ್ಟಿದ್ದ. ಇದ್ದಕ್ಕಿದ್ದಂತೆ ಒಂದೊಂದೇ ಪದಾರ್ಥಗಳು ನಾಪತ್ತೆಯಾದ ಹಿನ್ನಲೆ ಎಚ್ಚೆತ್ತ ಮಂಜೇಗೌಡರಿಗೆ ಅನುಮಾನ ಬಂದಿದ್ದು ಕಾರ್ ಡ್ರೈವರ್ ವಿಜಯಸಾಯಿ ಮೇಲೆ 990 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ 57 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿತ್ತು.
ಡ್ರೈವರ್ ಮೇಲೆ ಅನುಮಾನ ವ್ಯಕ್ತಪಡಿಸಿ ಮೇಟಗಳ್ಳಿ ಠಾಣೆಯಲ್ಲಿ ಮಂಜೇಗೌಡ ದೂರು ದಾಖಲಿಸಿದ್ದರು. ವಿಜಯಸಾಯಿ ಯನ್ನ ವಿಚಾರಣೆಗೆ ಒಳಪಡಿಸಿದಾಗ ಕಳುವು ಮಾಡಿರುವುದು ಖಚಿತವಾಗಿದೆ. ಆರೋಪಿಯಿಂದ ಕಳುವಾದ ಮಾಲನ್ನ ವಶಪಡಿಸಿಕೊಂಡ ಮೇಟಗಳ್ಳಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

