ಮೈಸೂರು : ಸಿಲಿಂಡರ್ ಸೋರಿಕೆಯಿಂದ ಅತ್ತೆ ಸೊಸೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಣಸೂರು ತಾಲೂಕಿನ ವಡ್ಡರಗುಡಿಯಲ್ಲಿರುವ ಆಶಾ ಕಾರ್ಯಕತೆಯಾಗಿರುವ ಶಾಂತಲ ಮನೆಯಲ್ಲಿ ನಡೆದಿದೆ.
ಅತ್ತೆ ಈರಮ್ಮ ಸೊಸೆ ಶಾಂತಲ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಮೇಲ್ಚಾವಣಿ ಮನೆಯಲ್ಲಿದ್ದ 60 ಗ್ರಾಂ ಚಿನ್ನಾಭರಣ, 3 ಲಕ್ಷ ರೂ ನಗದು ಸೇರಿ ಮನೆಯಲ್ಲಿದ್ದ ವಸ್ತುಗಳು ಬೆಂಗಿಗಾಹುತಿಯಾಗಿದೆ.

ಸಿಲಿಂಡರ್‌ನ ಜೋರು ಶಬ್ದ ಕೇಳಿ ಅಕ್ಕಪಕ್ಕದವರ ಸಹಾಯದಿಂದ ಅತ್ತೆಸೊಸೆ ಬಚಾವ್ ಆಗಿದ್ದಾರೆ. ಮನೆಯ ಒಳ ನುಗ್ಗಿ ಅತ್ತೆಸೊಸೆ ಇಬ್ಬರನ್ನ ಸ್ಥಳೀಯರು ಹೊರಗೆ ಕರೆತಂದಿದ್ದಾರೆ. ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮನೆಯ ಪಕ್ಕದಲ್ಲೇ ಹೊಸ ಮನೆ ನಿರ್ಮಿಸಲು ಬೀರುವಿನಲ್ಲಿಟ್ಟಿದ್ದ 3 ಲಕ್ಷರೂ ಭಸ್ಮವಾಗಿದೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

