ಮೈಸೂರು: ಚಾಮುಂಡೇಶ್ವರಿ ತಾಯಿಯ ತಾಳಿಯನ್ನೇ ಕದ್ದ ಖದೀಮನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈಸೂರಿನ ಗಾಯತ್ರಿಪುರಂನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಘಟನೆ ನಡೆದಿದೆ.

ಹಾಡಹಗಲೇ ಭಕ್ತನ ಸೋಗಿನಲ್ಲಿ ಬಂದು ದೇವರ ಕತ್ತಿನಲ್ಲಿದ್ದ ಮಾಂಗಲ್ಯ ಕದ್ದು ಎಸ್ಕೇಪ್ ಆಗಿದ್ದಾನೆ. ಆಷಾಢ ಮಾಸದ ಎರಡನೇ ಶುಕ್ರವಾರಕ್ಕೆ ಅರ್ಚಕ ತಯಾರಿ ನಡೆಸುತ್ತಿದ್ದರು. ದೇವಸ್ಥಾನದ ಬೀಗ ತೆರೆದು ನೀರು ತರಲು ಹೋಗಿದ್ದ ವೇಳೆ ಕೃತ್ಯ ನಡೆದಿದೆ.