ಟಿ.ನರಸೀಪುರ: ತಾಲ್ಲೂಕಿನ ಬನ್ನೂರು ಹೋಬಳಿಯ ಅಂಕನಹಳ್ಳಿ ಗ್ರಾಮ ಪಂಚಾಯತಿ ಅಂಕನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗ ಇದ್ದು ಅದರ ಪಕ್ಕದ ಕಟ್ಟೆಯನ್ನು ಕೆಲವು ಕಿಡಿಗೇಡಿಗಳ ಕುಮ್ಮಕ್ಕಿನ್ನಿಂದ ಕಟ್ಚೆ ಮುಚ್ಚುವ ಕಾರ್ಯ ಮಾಡುತ್ತಿದ್ದು ಇದು ಕಾನೂನುಬಾಹಿರವಾಗಿದೆ.
ಇದು ಗ್ರಾಮದಲ್ಲಿ ಕೋಮು ಗಲಭೆ ಸೃಷ್ಟಿಸಲು ದಾರಿ ಮಾಡಿಕೊಟ್ಟಂತ್ತಾಗುತ್ತದೆ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರ್ ಮದ್ಯ ಪ್ರವೇಶಿಸಿ ರೈತರು ಜನ,ಜಾನುವಾರುಗಳಿಗೆ ಆಶ್ರಯವಾಗಿರುವ ಈ ಕಟ್ಚೆಯನ್ನು ಉಳಿಸಬೇಕು.ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರ್ ನೇರ ಹೊಣೆಗಾರರಾಗಿರುತ್ತಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣಗೌಡ ಎಚ್ಚರಿಸಿದ್ದಾರೆ.
ಬನ್ನೂರು ಪಟ್ಟಣದ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಯಾವುದೇ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಕಟ್ಚೆಗಳನ್ನು ಮುಚ್ಚುವ ಅಧಿಕಾರವಿಲ್ಲ.ಇದು ಸುಪ್ರೀಂ ಕೋರ್ಟ್ ಆದೇಶ.ಇದನ್ನು ಮೀರಿ ಅನ್ಯ ಕೋಮಿನ ಸಮುದಾಯದ ವ್ಯಕ್ತಿಗಳು ಸರ್ವೇ ನಂ 97 ರಲ್ಲಿ 26 ಕುಂಟೆ ಕಟ್ಚೆ ಇರುವ ಜಾಗವನ್ನು ವಶಪಡಿಸಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಲು ಆರಂಭಿಸಿದ್ದು ಇದಕ್ಕೆ ನಮ್ಮ ಪ್ರಭಲ ವಿರೋಧವಿದೆ.ಈಗಾಗಲೇ ಗ್ರಾಮದಲ್ಲಿ ಸಣ್ಣ ಪುಟ್ಚ ಜಗಳಗಳು ಆರಂಭಗೊಂಡಿದ್ದು ಇದು ಬುಗಿಲೇಳದಂತೆ ಮಾಡುವುದು ತಾಲ್ಲೂಕು ಹಾಗೂ ಜಿಲ್ಲಾಡಳಿತದ ಜವಾಬ್ದಾರಿ ಆಗಿದೆ ಕೂಡಲೇ ಸರ್ತಾರ ಮದ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅತ್ತಹಳ್ಳಿ ಸ್ವಾಮಿರಾಜು ಮಾತನಾಡಿ ಕೆರೆ ಕಟ್ಟೆಗಳನ್ನು ಉಳಿಸಿ ಎಂದು ಸರ್ಕಾರವೇ ಹೇಳುತ್ತದೆ.ವಿಪರ್ಯಾಸವೆಂದರೆ ಅದೇ ಸರ್ಕಾರದ ಕುಮ್ಮಕ್ಕಿನ್ನಿಂದ 26 ಕುಂಟೆ ಕೆರೆಯನ್ನು ಮುಚ್ಚಿ ಅನ್ಯ ಕೋಮಿನವರು ಗ್ರಾಮದ ಪ್ರಮುಖರ ಜೊತೆ ಸೇರಿಕೊಂಡು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಕೋಮು ಗಲಭೆಗಳೇ ಹೆಚ್ಚುತ್ತವೆ.ಈಗ ನಮ್ಮ ಬನ್ನೂರು ಭಾಗದ ಅಂಕನಹಳ್ಳಿ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿ ಕೋಮು ಗಲಭೆ ಉಂಟಾದರೆ ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಟಿ.ಎಸ್.ಸಿದ್ದರಾಜು,ಶಂಕರೇಗೌಡ,ಟಿ.ಆರ್.ಬಸವರಾಜು, ಟಿ.ಆರ್.ಸುರೇಶ್, ರಮೇಶ್, ಟಿ.ಕೆ.ಶಿವ, ಟಿ.ವಿ.ಮಹೇಶ್, ಟಿ.ವಿ.ಹರ್ಷ, ಗಣೇಶ್, ಮಹದೇವ ಸೇರಿದಂತೆ ಹಲವಾರು ರೈತ ಮುಖಂಡರು ಇದ್ದರು.

